ಸಿಪಿಎಂ ಕಾಸರಗೋಡು ಏರಿಯಾ ಸಮ್ಮೇಳನ: ಸ್ವಾಗತ ಸಮಿತಿ ರಚನೆ

ಕಾಸರಗೋಡು:  ಸಿಪಿಎಂ ಕಾಸರಗೋಡು ಏರಿಯಾ ಸಮ್ಮೇಳನ ನವೆಂಬರ್ 19, 20ರಂದು ಅಣಂಗೂರಿನಲ್ಲಿ ನಡೆಯಲಿದೆ. ಇದರಂಗವಾಗಿ ಉಳಿಯತ್ತಡ್ಕದಲ್ಲಿ ಕೃಷಿ ಕಾರ್ಮಿಕರ ಸಂಗಮ, ಚೆರ್ಕಳದಲ್ಲಿ ವಿದ್ಯಾರ್ಥಿ ಯುವಜನ ಸಂಗಮ, ಕಾಸರಗೋಡು ಟ್ರೇಡ್ ಯೂನಿಯನ್ ಸಂಗಮ, ಎಡನೀರಿನಲ್ಲಿ ಮಹಿಳಾ ಸಂಗಮ ನಡೆಯಲಿದೆ. ವಿವಿಧ ಲೋಕಲ್ ಸಮಿತಿಗಳಲ್ಲಿ ಕಲಾ ಕ್ರೀಡಾ ಸ್ಪರ್ಧೆ ನಡೆಯಲಿದೆ. ನ. 17ರಂದು ವಿದ್ಯಾನಗರದಲ್ಲಿ ಡಂಗುರ ಜಾಥಾ ನಡೆಯಲಿದೆ.

ಈ ಬಗ್ಗೆ ನುಳ್ಳಿಪ್ಪಾಡಿಯ ಮಾರ್ಕ್ಸ್ ಭವನದಲ್ಲಿ ನಡೆದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯ ಟಿ.ಎಂ.ಎ. ಕರೀಂ ಅಧ್ಯಕ್ಷತೆ ವಹಿಸಿದರು. ಎಂ. ಸುಮತಿ, ಟಿ.ಕೆ. ರಾಜನ್ ಮಾತ ನಾಡಿದರು. ಕೆ.ಎ. ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

RELATED NEWS

You cannot copy contents of this page