ಸಿಪಿಎಂ ನೇತಾರ ನಿಧನ

ಕುಂಬಳೆ: ಮಾಟೆಂಗುಳಿ ನಿವಾಸಿ ಸಿಪಿಎಂ ನೇತಾರ ರಾಮ ಚಂದ್ರ ನಾಯರ್ (68) ನಿಧನ ಹೊಂದಿದರು. ಸಿಪಿಎಂ ಮಾಜಿ ಲೋಕಲ್ ಕಮಿಟಿ ಸದಸ್ಯರಾದ ಇವರು ಪ್ರಸ್ತುತ ಮಾಟೆಂಗುಳಿ ಬ್ರಾಂಚ್ ಕಮಿಟಿ ಸದಸ್ಯರಾಗಿದ್ದರು. ಮೂಲತಃ ಮಲಪ್ಪುರಂನ ತಿರೂರು ನಿವಾಸಿಯಾದ ಇವರು ೩೫ ವರ್ಷಗಳ ಹಿಂದೆ ಕುಂಬಳೆಗೆ ಆಗಮಿಸಿ ಇಲ್ಲಿ ವಾಸಿಸತೊಡಗಿದ್ದರು. ಇವರು ಕುಂಬಳೆಯಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಾಲ್ಕು ವರ್ಷಗಳ ಹಿಂದೆ ತಿರೂರಿನಲ್ಲಿ ಪಟಾಕಿ ಅಂಗಡಿ ನಡೆಸುತ್ತಿದ್ದರು. ನಿನ್ನೆ ಅಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಸೀತ, ಮಕ್ಕಳಾದ ಅಪ್ಪು, ಅಮ್ಮು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page