ಸಿಪಿಎಂ ನೇತಾರ  ಯು.ಕೃಷ್ಣ ಶೆಟ್ಟಿ ಸಂಸ್ಮರಣೆ

ಪೈವಳಿಕೆ: ಪೈವಳಿಕೆ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಯು. ಕೃಷ್ಣ ಶೆಟ್ಟಿಯವರು ೧೭ನೇ ಸಂಸ್ಮರಣೆ ವಾರ್ಷಿಕ  ದಿನಾಚರಣೆ ಕಳಾಯಿ ಸ್ಮೃತಿ ಮಂಟಪದಲ್ಲಿ ನಡೆಯಿತು. ಸಿಪಿಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಹಿರಿಯ ಸಿಪಿಎಂ  ನೇತಾರ ಕಳಾಯಿ ನಾರಾಯಣ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಅಬ್ದುಲ್ ರಜಾಕ್ ಚಿಪ್ಪಾರು ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಸಮಿತಿ ಸದಸ್ಯರಾದ ಬೇಬಿ ಶೆಟ್ಟಿ, ಪುರುಷೋತ್ತಮ ಬಳ್ಳೂರು, ಅಶೋಕ ಭಂಡಾರಿ, ಅಬ್ದುಲ್  ಹಾರಿಸ್, ವಿನಯ್ ಕುಮಾರ್ ಬಾಯಾರು, ಶ್ರೀನಿವಾಸ ಭಂಡಾರಿ, ಸದಾನಂದ ಕೋರಿಕ್ಕಾರ್, ಖಲೀಲ್ ಚಿಪ್ಪಾರು, ಮಾಲತಿ ಜಗದೀಶ್ ಶೆಟ್ಟಿ ಮಾತನಾಡಿದರು. ಲೋಕಲ್ ಕಾರ್ಯದರ್ಶಿ ಅಬ್ದುಲ್ಲ ಕೆ ಸ್ವಾಗತಿಸಿದರು.

RELATED NEWS

You cannot copy contents of this page