ಸಿಪಿಎಂ ಪಳೆಯುಳಿಕೆಯಂತಾಗಲಿದೆ-ಸೋಮಶೇಖರ ಜೆ.ಎಸ್.

ವರ್ಕಾಡಿ: ಕೇರಳದಲ್ಲಿ ಎರಡು ಅವಧಿಗಳಲ್ಲಿ ಆಡಳಿತ ನಡೆಸುತ್ತಿರುವ ಸಿಪಿಎಂ ನೇತೃತ್ವದ ಎಡರಂಗ ಸರಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಿಂಸೆ, ಸುಳ್ಳು ಭರವಸೆಗಳನ್ನು ನೀಡಿ ಜನರಿಂದ ದೂರವಾಗಿದ್ದು, ಮುಂದಿನ ವರ್ಷಗಳಲ್ಲಿ ಕೇವಲ ಪಳೆಯುಳಿಕೆಗಳಂತೆ ಆಗಲಿದೆಯೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ನುಡಿದರು. ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷವು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಚುನಾವಣೆಗೆ ಸಜ್ಜಾಗಿ ನಿಂತಿದೆ. ಆದರೆ ಎಡರಂಗ ಸರಕಾರ ತನ್ನ ಉಳಿವಿಗಾಗಿ ಫ್ಯಾಸಿಸ್ಟ್ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಳ್ಳಬಹುದೆಂದು ಅವರು ಆರೋಪಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲು ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ ಮಾತನಾಡಿದರು. ಎಸ್. ಅಬ್ದುಲ್ ಖಾದರ್ ಹಾಜಿ, ಕಮಲಾಕ್ಷಿ, ಮುಹಮ್ಮದ್ ಮಜಾಲ್, ವಿನೋದ್ ಪಾವೂರು, ಅಬೂಬಕ್ಕರ್ ಪೊಯ್ಯೆ, ಬಾಲಕೃಷ್ಣ ಕುಲಾಲ್, ಹೆನ್ರಿ ವೇಗಸ್, ಉಮ್ಮರ್ ಪಾಲೆಂಗ್ರಿ, ಕೆ.ಎಚ್. ಅಬೂಬಕ್ಕರ್, ಅಶ್ರಫ್ ಕೆ.ಕೆ., ದಿವಾಕರ್ ಎಸ್.ಜೆ., ಶರ್ಮಿಳ ಪಿಂಟೋ, ಬಾಸಿತ್ ತಲೆಕ್ಕಿ, ಸಲಾಂ ಮಾಂಕೋಡಿ, ರಾಜೇಶ್ ಡಿ’ಸೋಜ, ಚಂದ್ರಶೇಖರ ಅರಿಬೈಲು, ಉಮ್ಮರ್ ಬೋರ್ಕಳ, ಎ.ಎಂ. ಉಮ್ಮರ್‌ಕುಂಞಿ ಭಾಗವಹಿಸಿದರು

RELATED NEWS

You cannot copy contents of this page