ಸಿಪಿಎಂಗೆ ಸೇರಿದ ಮಾಜಿ ಮಂಡಲ ಅಧ್ಯಕ್ಷನ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ: ಕಚೇರಿ ಹಕ್ಕು ಕಾಂಗ್ರೆಸ್ಗೆಂದು ತೀರ್ಪು
ಪಾಲಕ್ಕಾಡ್: ಕೋಟಾಯಿಯ ಕಾಂಗ್ರೆಸ್ ಮಂಡಲ ಸಮಿತಿ ಕಚೇರಿಯಲ್ಲಿ ಹಕ್ಕು ಕಾಂಗ್ರೆಸ್ ಪಕ್ಷಕ್ಕೆಂದು ಆಲತ್ತೂರು ಮುನ್ಸಿಫ್ ನ್ಯಾಯಾಲಯ ತೀರ್ಪು ನೀಡಿದೆ. ಕಚೇರಿಯಲ್ಲಿ ಹಕ್ಕು ಮುಂದಿಟ್ಟು ಸಿಪಿಎಂನಲ್ಲಿ ಸೇರಿದ ಮಾಜಿ ಮಂಡಲ ಅಧ್ಯಕ್ಷನ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಕಟ್ಟಡ ಕಾಂಗ್ರೆಸ್ಗೆ ಬಾಡಿಗೆಗೆ ನೀಡಿರುವುದಾಗಿ ಮಾಲಕ ನೀಡಿದ ಹೇಳಿಕೆಯನ್ನು ನ್ಯಾಯಾಲಯ ಅಂಗೀಕರಿಸಿದೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಕಚೇರಿ ಪ್ರವೇಶಿಸು ವುದನ್ನು ತಡೆದುಕೊಂಡಿರುವ ಸ್ಟೇ ಆದೇಶವನ್ನು ರದ್ದುಪಡಿಸಲಾಯಿತು. ಮೋಹನ್ ಕುಮಾರ್ ಕಾಂಗ್ರೆಸ್ ತ್ಯಜಿಸಿ ಸಿಪಿಎಂಗೆ ಸೇರಿದ ಬೆನ್ನಲ್ಲೇ ಸಿಪಿಎಂನ ನೇತೃತ್ವದಲ್ಲಿ ಕಚೇರಿಯನ್ನು ಸ್ವಾಧೀನಪಡಿಸಲು ಯತ್ನಿಸಲಾಗಿತ್ತು. ಇದನ್ನು ತಡೆಯಲು ಕಾಂಗ್ರೆಸ್ ಮುಖಂಡರು ರಂಗಕ್ಕಿಳಿದಾಗ ಘರ್ಷಣೆ ಉಂಟಾಗಿತ್ತು. ಆ ಬಳಿಕ ಆರ್ಡಿಒ ವಹಿಸಿಕೊಂಡ ಕಚೇರಿ ಪ್ರಸ್ತುತ ಪೊಲೀಸ್ ಸಂರಕ್ಷಣೆಯಲ್ಲಿದೆ. ಆದರೆ ಕಾನೂನು ಹೋರಾಟ ಮುಂದುವರಿಸು ವುದಾಗಿ ಮೋಹನ್ ಕುಮಾರ್ ತಿಳಿಸಿದ್ದಾರೆ. ಕಚೇರಿಯ ಹಕ್ಕನ್ನು ದೃಢೀಕರಿಸಲು ಕೊನೆವರೆಗೆ ಹೋರಾಡು ವುದಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ಅಪೀಲು ನೀಡುವುದಾ ಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.