ಸಿಪಿಐ ನೇತಾರನ ತಾಯಿ ನಿಧನ
ಉಪ್ಪಳ: ಮೀಂಜ ಪಂಚಾ ಯತ್ ಉಪಾಧ್ಯಕ್ಷ, ಸಿಪಿಐ ಮಂಡಲ ಕಾರ್ಯದರ್ಶಿ ಜಯ ರಾಮ ಬಲ್ಲಂಗುಡೇಲ್ ಇವರ ತಾಯಿ ಸುಶೀಲ ಕೆ. (90) ನಿಧನ ಹೊಂದಿದರು. ದಿ| ಬಾಬು ಬೆಳ್ಚಾಡರ ಪತ್ನಿಯಾಗಿದ್ದಾರೆ. ಮೃತರು ಇತರ ಮಕ್ಕಳಾದ ರಮೇಶ, ರಾಜೇಶ್, ಲಕ್ಷ್ಮಣ, ಕಿಶೋರ್, ಸವಿತ, ಅಳಿಯ ವಾಮನ, ಸೊಸೆಯಂದಿ ರಾದ ಪಿಂಕಿ, ರೋಶಿನಿ, ಶೈಲಜಾ, ಚೈತನ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಪುತ್ರಿ ಸುಮಿತ್ರಾ, ಪುತ್ರ ಜಯಾನಂದ, ಅಳಿಯ ರಾಜ, ಇಬ್ಬರು ಸಹೋದರಿಯರಾದ ಕಮಲಾ, ಪ್ರೇಮ ಈ ಹಿಂದೆ ನಿಧನ ಹೊಂದಿದ್ದಾರೆ.