ಸುರಂಗದೊಳಗೆ ಸಿಲುಕಿ ಪುನರ್‌ಜನ್ಮ ಪಡೆದ ೪೧ ಕಾರ್ಮಿಕರಿಗೆ ಬಹುಮಾನ ಘೋಷಣೆ

ನವದೆಹಲಿ: ಬರೋಬ್ಬರಿ ೧೭ ದಿನಗಳ ಕಾಲ ಉತ್ತರಾಖಂಡದ ಸಿಲ್‌ಕ್ಕಾರಾ ಸುರಂಗದಲ್ಲಿ ಸಿಲುಕಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ೪೧ ಕಾರ್ಮಿಕರನ್ನು ಸತತ ೩೯೮ ಗಂಟೆಗಳ ಕಾಲ ಸತತವಾಗಿ ನಡೆದ ರಕ್ಷಣಾ ಕಾರ್ಯಾಚರಣೆ ಫಲವಾಗಿ ನಿನ್ನೆ ರಾತ್ರಿ ಪ್ರಾಣ ರಕ್ಷಿಸಿ ಅವರಿಗೆ ಪುನರ್‌ಜನ್ಮವನ್ನು ನೀಡುವಲ್ಲಿ  ಸಹಕರಿಸಿದ ಎಲ್ಲಾ ರಕ್ಷಣಾ ಕಾರ್ಯಾಚರಣೆ ತಂಡಕ್ಕೆ ಪ್ರಧಾನಮಂತ್ರಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸಾವಿನ ದವಡೆಯಿಂದ ಪಾರಾದ ೪೧ ಕಾರ್ಮಿಕರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಲಾ ೧ ಲಕ್ಷ ರೂ.ನಂತೆ ಬಹುಮಾನ ಘೋಷಣೆ ಮಾಡಿದ್ದಾರೆ. ಸುರಂಗದೊಳಗೆ ೧೭ ದಿನಗಳ ಕಾಲ ಸಿಲುಕಿ ಹೊರಬಂದ ಈ ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುಂದಿನ ೨೪ ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

You cannot copy contents of this page