ಸುಳ್ಯ: ಮನೆಯ ಕಿಟಿಕಿಯ ಸರಳು ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವುಗೈದಿದ್ದಾರೆ. ಕೊಡಿಯಾಲ ಗ್ರಾಮದ ಮೂವಪ್ಪ ಎಂಬಲ್ಲಿನ ನಸೀರ್ ಐ.ಎಚ್ ಎಂಬವರ ಮನೆಯಿಂದ ಕಳವು ನಡೆಸಲಾಗಿದೆ. ಮನೆ ಮಂದಿ ಕಳೆದ ಮೂರು ದಿನದಿಂದ ಬೇರೆಡೆಯಲ್ಲಿದ್ದು, ಮನೆಗೆ ಹಿಂತಿರುಗಿದಾಗ ಕಳವು ಕೃತ್ಯ ತಿಳಿದುಬಂದಿದೆ. ಬೆಡ್‌ರೂಂನಲ್ಲಿದ್ದ ಗೋದ್ರೇಜ್‌ನಲ್ಲಿದ್ದ ೧.೪೮ ಲಕ್ಷ ರೂ. ಮೌಲ್ಯದ ೪೦ ಗ್ರಾಂ ಚಿನ್ನಾಭರ ಣವನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
