ಸೂರ್ಯಮಾನ ಆದಿತ್ಯ ಎಲ್-೧ ಉಡಾವಣೆಗೆ ಕ್ಷಣಗಣನೆ
ಬೆಂಗಳೂರು: ಚಂದ್ರಯಾನ-೩ ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದ್ದು, ಇಂದು ಬೆಳಿಗ್ಗೆ ೧೧.೫೦ಕ್ಕೆ ಸೂರ್ಯಯಾನ ಆದಿತ್ಯ ಎಲ್-೧ದ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಆ ಮೂಲಕ ಇಸ್ರೋ ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ಸಿದ್ಧತೆಯಲ್ಲಿ ತೊಡಗಿದೆ.
ವಿಶ್ವದ ಕಣ್ಣು ಈಗ ಇಸ್ರೋದ ಸೂರ್ಯ ಮಿಷನ್ ಆದಿತ್ಯ- ಎಲ್-೧ನ ಮೇಲಿದೆ. ಪಿಎಸ್ಎಲ್ವಿ- ಎಕ್ಸ್ಎಲ್ ರಾಕೆಟ್ ಸಹಾಯದಿಂದ ಇಸ್ರೋ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಈ ಸೂರ್ಯ ಮಿಷನ್ ಆದಿತ್ಯ ಎಲ್-೧ಗೆ ಕೇವಲ ೩೭೮ ಕೋಟಿ ರೂ. ಮಾತ್ರವೇ ವೆಚ್ಚ ತಗಲಿದೆ. ೧೦೯ ದಿನಗಳ ಯಾತ್ರೆ ನಡೆಸಿ ಇದು ತನ್ನ ಪಾಯಿಂಟ್ ತಲುಪಲಿದೆ. ಆ ಹಂತ ತಲುಪಿದ ನಂತರ ಆದಿತ್ಯ ಎಲ್-೧ ಪ್ರಮುಖ ಮಾಹಿತಿ ನೀಡಲು ಪ್ರಾರಂಭಿಸುತ್ತದೆ. ಇಂದು ಬೆಳಿಗ್ಗೆ ೧೧.೫೦ಕ್ಕೆ ಆಂಧ್ರಾ ಪ್ರದೇಶದ ಬಾಹ್ಯಾಕಾಶ ನಿಲ್ದಾಣ ಕೇಂದ್ರದಿಂದ ಆದಿತ್ಯ ಎಲ್-೧ನ ಉಡಾವಣೆಗೊಳ್ಳಲಿದೆ.
ಆದಿತ್ಯ ಎಲ್-೧ ತನ್ನೊಂದಿಗೆ ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರ ಪದರುಗಳನ್ನು (ಕರೋನಾ) ಒಯ್ಯುತ್ತಿದೆ. ಇದನ್ನು ಪರಿಶೀಲಿಸಲು ಆದಿತ್ಯ-ಎಲ್-೧ ಏಳು ಪೇಲೋಡ್ಗನ್ನು ಸಾಗಿಸಲಿದೆ. ಇದರಲ್ಲಿ ೪ ಪೇಲೋಡ್ಗಳು ಸೂರ್ಯನ ಚಲನೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಉಳಿದ ೩ ಪೇಲೋಡ್ಗಳು ಎಲ್-೧ ಬಿಂದವಿನ ಸೂತ್ತಲೂ ಅಧ್ಯಯನ ಮಾಡಲಿದೆ. ಈ ಕಾರ್ಯಾಚರಣೆಯೊಂದಿಗೆ, ಬಾಹ್ಯಾಕಾಶ ಹವಾಮಾನದ ಮೇಲೆ ಸೂರ್ಯನ ಚಲನೆಯ ಪರಿಣಾಮವನ್ನು ನೈಜ ಸಮಯದಲ್ಲಿ ಅಧ್ಯಯನ ಮಾಡಲಿದೆ. ಕರೋನಲ್ ತಾಪನ ದ್ರವ್ಯರಾಶಿ ಹೊರಸೂಸುವಿಕೆ, ಪ್ರಾಫಿ ಫ್ಲೇರ್ಸ ಮತ್ತು ಜ್ವಾಲೆಗಳು, ಡೈನಾಮಿಕ್ಸ್ ಬಾಹ್ಯಾಕಾಶ ಹವಾಮಾನ, ಕಣಗಳ ಚಟುವಟಿಕೆಗಳು ಮತ್ತು ಗುಣಲಕ್ಷಣಗಳನ್ನು ಅಧ್ಯಯನ ಮಾಡಲಿದೆ. ಭೂಮಿ ಮತ್ತು ಸೂರ್ಯನ ನಡುವೆ ೧.೫ ಮಿಲಿಯನ್ ಕಿಲೋ ಮೀಟರ್ ಅಂತರವಿದೆ. ಇದನ್ನು ಕ್ರಮಿಸಲು ೧೦೯ ದಿನಗಳ ಸಮಯ ತಗಲಲಿದೆ.