ಸೆರೆಮನೆಗೆ ತಳ್ಳುವುದಾಗಿ ಬೆದರಿಸಿ ಹಣ ಎಗರಿಸಲು ಯತ್ನ: ಫೋನ್ ಕರೆ ಬಂದಿದ್ದು ಯುಡಿಎಫ್ ಜಿಲ್ಲಾ ಕಾರ್ಯದರ್ಶಿಗೆ

ಕಾಸರಗೋಡು: ಮುಂಬೈ ಟೆಲಿಕಾಂ ರೆಗ್ಯುಲೇಟರ್ ಅಥೋರಿಟಿಯ ಹೆಸರಲ್ಲಿ ಫೋನ್‌ನಲ್ಲಿ ಕರೆ ಮಾಡಿ ಹಣ ನೀಡುವಂತೆ ಬೇಡಿಕೆಯೊಡ್ಡಿ ನೀಡದಿದ್ದಲ್ಲಿ ಜೈಲಿಗಟ್ಟಲಾಗುವುದೆಂದು ಕಾಂಗ್ರೆಸ್ ನೇತಾರರಿಗೆ ಬೆದರಿಕೆಯೊಡ್ಡಿ ಹಣ ಎಗರಿಸಲೆತ್ನಿಸಿದ ಘಟನೆ ನಡೆದಿದೆ.

ಕಾಂಗ್ರೆಸ್ ನೇತಾರ ಹಾಗೂ ಯುಡಿಎಫ್ ಜಿಲ್ಲಾ ಕಾರ್ಯದರ್ಶಿ ಯಾಗಿರುವ  ಎ ಗೋವಿಂದನ್ ನಾಯರ್‌ರ ಮೊಬೈಲ್ ಫೋನ್‌ಗೆ ಈ ಬೆದರಿಕೆ ಕರೆ ಬಂದಿದೆ.  ನಿಮ್ಮ ಮೊಬೈಲ್ ಫೋನ್‌ನ ಆಧಾರ್ ಕಾರ್ಡ್ ನಂಬ್ರ ಬಳಸಿ ನವಂಬರ್ ೨ರಂದು ಮುಂಬೈ ಯಲ್ಲಿ ಸಿಮ್ ಪಡೆಯಲಾಗಿದೆ. ಆ ನಂಬ್ರ ಉಪಯೋಗಿಸಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲಾಗಿದೆ. ಅದಕ್ಕೆ ಸಂಬಂಧಿಸಿ ೧೭ ಪ್ರಕರಣ ದಾಖಲಾಗಿವೆಯೆಂದು ಟೆಲಿಕಾಂ ರೆಗ್ಯುಲೇಟರಿ ಅಥೋರಿ ಟಿಯ ಹೆಸರಲ್ಲಿ ಗೋವಿಂದನ್ ನಾಯರ್ ಫೋನ್‌ಗೆ  ವಂಚಕ ನೋರ್ವ ಕರೆಮಾಡಿ ತಿಳಿಸಿದ್ದಾನೆ.

ನಿಮ್ಮ ಫೋನ್ ಮೂರು ನಿಮಿಷಗಳಲ್ಲಿ ಕ್ಯಾನ್ಸಲ್ ಆಗಲಿದೆ.  ಬಳಿಕ ಮುಂಬೈ ಪೊಲೀಸರಿಗೆ ಇದರ ಸಂಪರ್ಕ ನೀಡಲಾಗುವುದು. ಅದನ್ನು  ತಪ್ಪಿಸಲು ಬಂದ  ನೀವು ಮುಂಬೈ ಪೊಲೀಸರ ಮುಂದೆ ಹಾಜರಾಗಿ ಇಲ್ಲವಾದಲ್ಲಿ ಹಣ ನೀಡಿ  ಹೋಟ್ ಲೈನ್‌ನಲ್ಲಿ  ಮುಂಬೈ ಪೊಲೀಸರೊಂ ದಿಗೆ ಮಾತನಾಡಿ. ಅದಕ್ಕಾಗಿ ನಾನು ಫೋನ್ ಕನೆಕ್ಟ್ ಮಾಡಿ ನೀಡುವೆ ಎಂದು  ಫೋನ್ ಕರೆ ಮಾಡಿದ ವ್ಯಕ್ತಿ ತಿಳಿಸಿದ್ದನು. ಆಗ ಆ ಕೇಸಿಗೆ ಸಂಬಂಧಿಸಿದ ಎಫ್‌ಐಆರ್‌ನ್ನು ವಾಟ್ಸಪ್ ಮೂಲಕ ನನಗೆ ಕಳುಹಿಸಿ ಎಂದು  ಗೋವಿಂದನ್ ನಾಯರ್ ಅದಕ್ಕೆ ಪ್ರತಿಕ್ರಿಯೆ ನೀಡಿದಾಗ   ಫೋನ್ ಕರೆದ ವ್ಯಕ್ತಿ ತಕ್ಷಣ ಫೋನ್ ಕಟ್ ಮಾಡಿದ್ದು ಮಾತ್ರವಲ್ಲ ಫೋನ್ ಮಾಡಿದ ಅರ್ಧ ತಾಸುಗಳ ತನಕ ಮಾತನಾಡಿ ಭೀತಿಯ ವಾತಾವರಣ ಸೃಷ್ಟಿಸುವ ರೀತಿಯ ಪ್ರತೀತಿ ಯನ್ನೂ ಆ ವಂಚಕ ಸೃಷ್ಟಿಸಿದ್ದನು. ಆತನ ಮಾತನ್ನು ಕೇಳಿ ಅದ್ಯಾರೇ ಆದರೂ  ಭಯಭೀತರಾಗಿ ಆತನ ವಂಚನಾ ಜಾಲಕ್ಕೆ ಬೀಳುವುದಂತೂ ಖಂಡಿತ ವೆಂದು ಗೋವಿಂದನ್ ನಾಯರ್ ಹೇಳಿದ್ದಾರೆ. ಇಂತಹ ಬೆದರಿಕೆಗಳ ಬಗ್ಗೆ ಎಲ್ಲರೂ ಜಾಗೃತರಾಗಬೇಕೆಂದು ಅವರು ಹೇಳಿದ್ದಾರೆ.

RELATED NEWS

You cannot copy contents of this page