ಸೇವಾ ಭಾರತಿಯಿಂದ ಜನಾರ್ದನ ಪ್ರತಾಪನಗರ ಸ್ಮರಣಾರ್ಥ ರಕ್ತದಾನ ಶಿಬಿರ

ಉಪ್ಪಳ: ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿ ಸೇವಾಭಾರತಿ ಮಂಗಲ್ಪಾಡಿ ಮತ್ತು ಸೇವಾ ಸಹಕಾರಿ ಬ್ಯಾಂಕ್ ಮಂಗಲ್ಪಾಡಿ ಇದರ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ದಿ| ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ಐಲ ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ನಡೆಯಿತು. ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿ ಮಂಗಲ್ಪಾಡಿ ಇದರ ಅಧ್ಯಕ್ಷ ಕೃಷ್ಣ.ಪಿ ಬಂದ್ಯೋಡು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ರಾಷ್ಟಿçÃಯ ಸ್ವಯಸೇವಕ ಸಂಘದ ಮಂಜೇಶ್ವರ ಕಾರ್ಯವಾಹ ಮಹಾಬಲ ಅಧ್ಯಕ್ಷತೆ ವಹಿಸಿದರು. ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ಡಾ| ಇಶಾನ್, ಸೇವಾಭಾರತಿ ಕಾರ್ಯದರ್ಶಿ ಸತೀಶ್ ಶೆಟ್ಟಿ, ಮಂಗಲ್ಪಾಡಿ ಸೇವಾಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರೇಮ್ ಕುಮಾರ್ ಐಲ ಉಪಸ್ಥಿತರಿದ್ದರು. ಸೇವಾಭಾರತಿ ಪ್ರಮುಖ್ ಸತೀಶ್ ಮಾಸ್ತರ್ ಸ್ವಾಗತಿಸಿ, ಪದ್ಮಾವತಿ ಟೀಚರ್ ನಿರೂಪಿಸಿದರು. ರಾಮಚಂದ್ರ ಬಲ್ಲಾಳ್ ವಂದಿಸಿದರು.

You cannot copy contents of this page