ಸೇವ್ ಅನಂತಪುರ ಸತ್ಯಾಗ್ರಹ ಹಿಂತೆಗೆತ

ಸೀತಾಂಗೋಳಿ: ಅನಂತಪುರ ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯಾಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್ ವಿರುದ್ಧ ಸೇವ್ ಅನಂತಪುರ ಕ್ರಿಯಾ ಸಮಿತಿ ನಡೆಸುತ್ತಿದ್ದ ಸತ್ಯಾಗ್ರಹವನ್ನು ನಿನ್ನೆ ಸಂಜೆ ತಾತ್ಕಾಲಿಕವಾಗಿ ಕೊನೆಗೊಳಿಸಲಾ ಯಿತು.  ಇದೇ ಸಂದರ್ಭದಲ್ಲಿ ಶಾಸಕ ಎಕೆಎಂ ಅಶ್ರಫ್ ಸತ್ಯಾಗ್ರಹ ಸ್ಥಳಕ್ಕೆ ತಲುಪಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ಲಾಂಟ್‌ನಿಂದ ಸೃಷ್ಟಿಯಾಗಿರುವ  ತ್ಯಾಜ್ಯ ಸಮಸ್ಯೆಗೆ ಎರಡು ತಿಂಗಳೊಳಗೆ ಪರಿಹಾರ ಕಾಣುವುದಾಗಿ  ಭರವಸೆ ಲಭಿಸಿದ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ. ಸಮಸ್ಯೆಗೆ ಪರಿಹಾರವುಂಟಾಗದಿದ್ದಲ್ಲಿ ಸತ್ಯಾಗ್ರಹ ಪುನರಾರಂಭಿಸುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ.

RELATED NEWS

You cannot copy contents of this page