ಸೊಸೈಟಿಯಲ್ಲಿ ಅಡವು ಇರಿಸಿದ ೨೮.೫ ಪವನ್ ಚಿನ್ನಾಭರಣ ನಾಪತ್ತೆ: ನಿವೃತ್ತ ಕಾರ್ಯದರ್ಶಿ ವಿರುದ್ಧ ಕೇಸು
ಬಂದಡ್ಕ: ನಕಲಿ ಸಹಿ ಹಾಕಿ ೨೮.೫ ಪವನ್ ಚಿನ್ನಾ ಭರಣವನ್ನು ವಶಪಡಿಸಿರುವುದಾಗಿ ದೂರಲಾಗಿದೆ. ಮಹಿಳೆಯ ದೂರಿನಂತೆ ಸೊಸೈಟಿಯ ನಿವೃತ್ತ ಕಾರ್ಯದರ್ಶಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುತ್ತಿಕ್ಕೋಲ್, ಪರಪ್ಪದ ಕುಂಞಂಬು ನಾಯರ್‌ರ ಪತ್ನಿ ಪಿ. ಇಂದಿರರ ದೂರಿನಂತೆ ಕುತ್ತಿಕ್ಕೋಲ್ ಅಗ್ರಿಕಲ್ಚರಲ್ ಸೊಸೈಟಿ ಯ ನಿವೃತ್ತ ಕಾರ್ಯ ದರ್ಶಿ ಬೇತೂರುಪಾರದ ಮಣಿಕಂಠನ್‌ರ ವಿರುದ್ಧ ಕೇಸು ದಾಖಲಿಸಲಾಗಿದೆ.
೨೦೦೯ ಮಾರ್ಚ್‌ನಿಂದ ೨೦೧೮ ಅಗೋಸ್ತ್‌ವರೆಗಿರುವ ವಿವಿಧ ಕಾಲಾವಧಿಗಳಲ್ಲಿ ಅಡವು ಇರಿಸಿದ್ದ ಚಿನ್ನಾಭರಣವನ್ನು ತಾನು ತಿಳಿಯದೆ ನಕಲಿ ಸಹಿ ಹಾಕಿ ವಶಪಡಿಸಿರು ವುದಾಗಿ ಇಂದಿರಾ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಕಾಲಾ ವಧಿಯಲ್ಲಿ ಸೊಸೈಟಿಯ ಕಾರ್ಯದರ್ಶಿಯಾಗಿದ್ದ ಮಣಿಕಂಠರ ಬಗ್ಗೆ ಶಂಕೆಯಿ ರುವುದಾಗಿ ಇಂದಿರ ದೂರಿನಲ್ಲಿ ತಿಳಿಸಿದ್ದಾರೆ. ಬ್ಯಾಂಕ್‌ಗೆ ನೀಡಿದ ಸಹಿ ನಕಲಿಯೋ ಎಂದು ಪತ್ತೆಹಚ್ಚಲು ಫಾರೆನ್ಸಿಕ್ ತಪಾಸಣೆ ಹಾಗೂ ಇತರ ವೈಜ್ಞಾನಿಕ ತಪಾಸಣೆಗಳನ್ನು ನಡೆಸಲು ಪೊಲೀಸರು ಸಿದ್ಧರಾಗಿ ದ್ದಾರೆ. ಇದರಂಗವಾಗಿ ಸೊಸೈಟಿಯ ದಾಖಲೆಗಳನ್ನು ಕಸ್ಟಡಿಗೆ ತೆಗೆದು ಫಾರೆನ್ಸಿಕ್ ಲ್ಯಾಬ್‌ಗೆ ತಪಾಸಣೆಗೆ ಕಳುಹಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಸಿಪಿಎಂ ನಿಯಂತ್ರಣದಲ್ಲಿ ಈ ಸೊಸೈಟಿ ಕಾರ್ಯಾಚರಿಸುತ್ತಿದೆ.