ಸೋಮವಾರದಿಂದ ಅಂಗಡಿ ಮುಚ್ಚಿ ರೇಶನ್ ವ್ಯಾಪಾರಿಗಳ ಮುಷ್ಕರ
ತಿರುವನಂತಪುರ: ರಾಜ್ಯ ಸರಕಾರ ನಡೆಸಿದ ಚರ್ಚೆ ಪರಾಭವಗೊಂಡ ಹಿನ್ನೆಲೆಯಲ್ಲಿ ಮುಷ್ಕರ ಹೂಡುವುದಾಗಿ ರೇಶನ್ ವ್ಯಾಪಾರಿಗಳು ಘೋಷಿಸಿದ್ದಾರೆ. ಸೋಮವಾರದಿಂದ ಅಂಗಡಿ ಮುಚ್ಚಿ ಮುಷ್ಕರ ನಡೆಸುವುದಾಗಿ ಅವರು ತಿಳಿಸಿದ್ದಾರೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆಸಿದ ಚರ್ಚೆ ಪರಾಜಯಗೊಂಡ ಹಿನ್ನೆಲೆಯಲ್ಲಿ ರೇಶನ್ ವ್ಯಾಪಾರಿಗಳ ಸಂಘಟನೆ ಈ ತೀರ್ಮಾನ ಕೈಗೊಂಡಿದೆ. ರಾಜ್ಯ ಎದುರಿಸುತ್ತಿರುವ ಆರ್ಥಿಕ ಸಂದಿಗ್ಧತೆ ಹಿನ್ನೆಲೆಯಲ್ಲಿ ಕಮಿಷನ್ ಹೆಚ್ಚಿಸಲು ಸಾಧ್ಯವಿಲ್ಲವೆಂದು ಸಚಿವ ಜಿ.ಆರ್. ಅನಿಲ್ ಚರ್ಚೆಯಲ್ಲಿ ತಿಳಿಸಿದ್ದಾರೆ. ವೇತನ ಪರಿಷ್ಕರಣೆ ಸಮಿತಿಯ ಶಿಫಾರಸುಗಳ ಬಗ್ಗೆ ರೇಶನ್ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಮಂತ್ರಿ ನುಡಿದರು. ಇದೇ ವೇಳೆ ಮುಷ್ಕರದಿಂದ ವ್ಯಾಪಾರಿಗಳು ಹಿಂಜರಿಯಬೇಕೆಂದು ಸಚಿವ ಆಗ್ರಹಿಸಿದರು. ಕೆಲಸ ಸ್ಥಗಿತ ಮುಷ್ಕರಕ್ಕೆ ಕೇರಳ ಸ್ಟೇಟ್ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಬೆಂಬಲ ಸೂಚಿಸಿದೆ.