ಸೌದಿಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಇಂದು ಊರಿಗೆ

ಬದಿಯಡ್ಕ: ಹತ್ತು ದಿನ ಗಳ ಹಿಂದೆ ಸೌದಿ ಅರೇಬಿ ಯಾದಲ್ಲಿ ಮೃತಪಟ್ಟ ಅಗಲ್ಪಾಡಿ ಪಂಜರಿಕೆಯ ನಾರಾಯಣ ಮಣಿಯಾಣಿ (೬೦)ಯವರ ಮೃತದೇಹವನ್ನು ಇಂದು ಅಪರಾಹ್ನ ಮನೆಗೆ ತಲುಪಿಸಲಾಗುವುದು.

ಮೃತದೇಹವನ್ನು ಮಧ್ಯಾಹ್ನ ವೇಳೆ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ತಲುಪಿಸಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಹೃದಯ ಸಂಬಂಧ ಅಸೌಖ್ಯ ಬಾಧಿಸಿ ನಾರಾಯಣ ಮಣಿಯಾಣಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಐದು ವರ್ಷಗಳಿಂದ ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.  ಮೃತರು ಪತ್ನಿ ಯಶೋಧ, ಮಕ್ಕಳಾದ ಪೂರ್ಣಿಮ, ಅಪೂರ್ವ, ಅನಿಲ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page