ಸೌಲಭ್ಯ ವಿತರಣೆಯಲ್ಲಿ ಪಾರದರ್ಶಕತೆ ತಂದ ಕೇಂದ್ರ ಸರಕಾರ- ಎಂ.ಎಲ್. ಅಶ್ವಿನಿ

ಬಂದಡ್ಕ: ಕೇಂದ್ರದ ಸೌಲಭ್ಯಗಳನ್ನು, ಸಬ್ಸಿಡಿಗಳನ್ನು ಪಾರದರ್ಶಕತೆಯಿಂದ ನಿಜವಾದ ಫಲಾನುಭವಿಗಳಿಗೆ ವಿತರಿಸಲು, ಅದು ಅವರಿಗೆ ಲಭಿಸುತ್ತಿದೆ ಎಂದು ಖಚಿತಪಡಿಸಲು ಡೈರೆಕ್ಟ್ ಬೆನಫಿಟ್ ಟ್ರಾನ್ಸ್‌ಫರ್ ಮೂಲಕ ಸಾಧ್ಯವಾಗಿದೆ ಎಂದು, ಇದಕ್ಕಾಗಿ ಕೋಟ್ಯಂತರ ಜನಸಾಮಾನ್ಯರು ನರೇಂದ್ರ ಮೋದಿ ಸರಕಾರಕ್ಕೆ ಋಣಿಗಳಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಕುತ್ತಿಕೋಲ್ ಪಂ. 5ನೇ ವಾರ್ಡ್ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 10 ವರ್ಷ ಆಡಳಿತ ನಡೆಸಿದ ಪಿಣರಾಯಿ ವಿಜಯನ್‌ರಿಂದ ರಾಜ್ಯದ ಆರ್ಥಿಕತೆ ಸಂಪೂರ್ಣ ನಾಶವಾಗಿದೆ. ಆರೋಗ್ಯ -ಶಿಕ್ಷಣ ವಲಯಗಳಲ್ಲಿ ಅಧೋಗತಿ ಕಂಡು ಬರುತ್ತಿದೆ. ಶಿಕ್ಷಣ, ಉದ್ಯೋಗಕ್ಕಾಗಿ ಕೇರಳೀಯರು ರಾಜ್ಯ ದಿಂದ ಪಲಾಯನ ಮಾಡುತ್ತಿರುವು ದಾಗಿಯೂ ಅಶ್ವಿನಿ ಆರೋಪಿಸಿದರು. ಬೂತ್ ಸಮಿತಿ ಅಧ್ಯಕ್ಷ ಸಂಜೀವ ಅಧ್ಯಕ್ಷತೆ ವಹಿಸಿದರು. ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page