ಸ್ಕೂಟರ್ನ ಹಿಂಬದಿಗೆ ಲಾರಿ ಢಿಕ್ಕಿ ಹೊಡೆದು ಯುವಕ ಮೃತ್ಯು: ಇನ್ನೋರ್ವನಿಗೆ ಗಾಯ
ಉಪ್ಪಳ: ಸ್ಕೂಟರ್ನ ಹಿಂಬದಿಗೆ ಲಾರಿ ಢಿಕ್ಕಿ ಹೊಡೆದು ಮೊಬೈಲ್ ಅಂಗಡಿ ನೌಕರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಜತೆಗಿದ್ದ ಸ್ನೇಹಿತ ಗಾಯಗೊಂಡಿದ್ದು ಅವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ.
ಕನ್ನಟಿಪಾರೆ ಕೆದಕ್ಕಾರು ನಿವಾಸಿ ಹನೀಫ್ ಎಂಬವರ ಪುತ್ರ ಮುಹಮ್ಮದ್ ಅನ್ವಾಸ್ (24) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಂಗಡಿಮೊಗರು ನಿವಾಸಿ ಫಸಲ್ ರಹಿಮಾನ್ ಎಂಬವರು ಗಾಯಗೊಂ ಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಂದು ಮುಂಜಾನೆ ೪ ಗಂಟೆಗೆ ಮಂಜೇಶ್ವರ ಉದ್ಯಾವರ ರಫಾ ಹಾಲ್ ಬಳಿಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಪಘಾತ ಸಂಭವಿಸಿದೆ. ಮುಹಮ್ಮದ್ ಅನ್ವಾಸ್ ಹಾಗೂ ಫಸಲ್ ರಹಿಮಾನ್ರ ಸ್ನೇಹಿತನಾದ ಒಬ್ಬರು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇದರಿಂದ ಈ ಇಬ್ಬರು ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿದ್ದರು. ಇಂದು ಮುಂಜಾನೆ ಮನೆಗೆ ತೆರಳುವ ಮುಂಚೆ ತಮ್ಮ ಇಲೆಕ್ಟ್ರಿಕ್ ಸ್ಕೂಟರ್ಗೆ ಜಾರ್ಜ್ ಮಾಡಲೆಂದು ತಲಪಾಡಿ ಭಾಗಕ್ಕೆ ಹೋಗುತ್ತಿದ್ದರು. ಈ ವೇಳೆ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಲಾರಿಯೊಂದು ಸ್ಕೂಟರ್ನ ಹಿಂಬದಿಗೆ ಢಿಕ್ಕಿ ಹೊಡೆ ದಿದೆ. ಇದರಿಂದ ಸ್ಕೂಟರ್ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಈ ಪೈಕಿ ಸ್ಕೂಟರ್ನ ಹಿಂಬದಿ ಕುಳಿತಿದ್ದ ಮುಹ ಮ್ಮದ್ ಅನ್ವಾಸ್ ಗಂಭೀರ ಗಾಯ ಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸತ್ರೆಗೆ ಕರೆದೊ ಯ್ಯುತ್ತಿದ್ದಂತೆ ಮುಹಮ್ಮದ್ ಅನ್ವಾಸ್ ಮೃತಪಟ್ಟಿದ್ದಾರೆ. ಇವರು ಉಪ್ಪಳದಲ್ಲಿ ಮೊಬೈಲ್ ಅಂಗಡಿ ನೌಕರನಾಗಿದ್ದರು. ಅಪಘಾತ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮೃತರು ತಂದೆ, ತಾಯಿ ನಫೀಸ, ಸಹೋದರಿ ಅನ್ಸೀಫ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.