ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಾಪಾರಿ ಮೃತ್ಯು
ಕಾಸರಗೋಡು: ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತವುಂಟಾಗಿ ಕಾಸರಗೋಡಿನ ಸಿಗರೇಟ್ ವ್ಯಾಪಾರಿ ಮೃತಪಟ್ಟರು. ಸೂರ್ಲು ಕುಂದಿಲದ ದಿ| ವೆಂಕಟೇಶ ಭಕ್ತ- ಪದ್ಮ ಭಕ್ತ ದಂಪತಿಯ ಪುತ್ರ ದಾಮೋದರ ಭಕ್ತ (53) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಕಾಸರಗೋಡು ಪೇಟೆಯಲ್ಲಿ ಸ್ಕೂಟರ್‌ನಲ್ಲಿ ದಾಮೋದರ ಭಕ್ತ ಸಂಚರಿಸುತ್ತಿದ್ದಾಗ ಅವರಿಗೆ ಎದೆನೋವಿನ ಅನುಭವಗೊಂಡಿದೆ. ಕೂಡಲೇ ಸ್ಕೂಟರನ್ನು ರಸ್ತೆ ಬದಿ ನಿಲ್ಲಿಸಿದ್ದು, ತಕ್ಷಣ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಶಕುಂತಳ ಭಕ್ತ, ಮಕ್ಕಳಾದ ಅಭಿಷೇಕ್ ಭಕ್ತ, ಕಾರ್ತಿಕ್ ಭಕ್ತ, ಆದರ್ಶ್ ಭಕ್ತ, ಸಹೋದರಿ ಶಂಕರಿ ಭಕ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.