ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಇಬ್ಬರ ಬಂಧನ

ಕುಂಬಳೆ: ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 6.90ಗ್ರಾಂ ಎಂಡಿಎAಎ ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಶಿರಿಬಾಗಿಲು ನೇಶನಲ್ ನಗರ ಅಪ್ಸಲ್ ಮಂಜಿಲ್ನ ಮುಹಮ್ಮದ್ ಸುಹೈಲ್ (27), ಎಡನಾಡು ಕಟ್ಟತ್ತಡ್ಕ ಸಜಂಕಳದ ಮುಹಮ್ಮದ್ ರಫೀಕ್ (39) ಎಂಬಿವರನ್ನು ಕುಂಬಳೆ ಎಸ್ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ 10.15ರ ವೇಳೆ ಎಡನಾಡು ಕಟ್ಟತ್ತಡ್ಕದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಈ ಇಬ್ಬರು ಮಾದಕವಸ್ತು ಸಹಿತ ಸೆರೆಗೀಡಾಗಿದ್ದಾರೆ. ಎಎಸ್ಐ ಮನೋಜ್, ಬಾಲಕೃಷ್ಣ ಪ್ರಸಾದ್, ಡಾನ್ಸಾಫ್ ತಂಡದ ಸದಸ್ಯರಾದ ನಿಜಿನ್, ರತೀಶ್ ಕಾಟಾಂಬಳ್ಳಿ ಎಂಬಿವರು ರಾತ್ರಿ ಹೊತ್ತಿನಲ್ಲಿ ಗಸ್ತು ನಡೆಸುತ್ತಿದ್ದರು. ಪೊಲೀಸರು ಕಟ್ಟತ್ತಡ್ಕಕ್ಕೆ ತಲುಪಿದಾಗ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ನೊಂದಿಗೆ ಯುವಕರು ಓಡಿ ಪರಾರಿಯಾಗಲು ಪ್ರಯತ್ನಿಸಿರುವುದರಿಂದ ಪೊಲೀಸರು ಸಂಶಯಗೊAಡಿದ್ದಾರೆ. ಕೂಡಲೇ ಅವರಿಬ್ಬರನ್ನು ತಡೆದು ನಿಲ್ಲಿಸಿ ದೇಹ ತಪಾಸಣೆ ನಡೆಸಿದಾಗ ಎಂಡಿಎAಎ ಪ್ಲಾಸ್ಟಿಕ್ ಕವರ್ನಲ್ಲಿ ತುಂಬಿಸಿ ಬಚ್ಚಿಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆಯೆAದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸ್ಕೂಟರನ್ನು ಕಸ್ಟಡಿಗೆ ತೆಗೆಯಲಾಗಿದೆ.

You cannot copy contents of this page