ಸ್ಥಳ ಲಭ್ಯಗೊಳಿಸಿದರೆ ರಾಜ್ಯದಲ್ಲಿ ಅಣುಶಕ್ತಿ ನಿಲಯ ಸ್ಥಾಪನೆ- ಕೇಂದ್ರ
ತಿರುವನಂತಪುರ: ೧೫೦ ಎಕ್ರೆ ಸ್ಥಳ ಲಭ್ಯಗೊಳಿಸಿದರೆ ಕೇರಳದಲ್ಲಿ ಅಣುಶಕ್ತಿ ನಿಲಯ ಮಂಜೂರು ಮಾಡಲು ಸಿದ್ಧವೆಂದು ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟಾರ್ ತಿಳಿಸಿದ್ದಾರೆ. ರಾಜ್ಯದ ವಿದ್ಯುತ್ ನಗರ ಅಭಿವೃದ್ಧಿ ಚಟುವಟಿಕೆಗಳನ್ನು ಅವಲೋಕಿಸಲು ತಲುಪಿದ ಸಚಿವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕಾಸರಗೋಡಿನಲ್ಲಿ ಚೀಮೇನಿ ಇದಕ್ಕೆ ಸೂಕ್ತ ಸ್ಥಳವೆಂದು ಸಚಿವರು ನುಡಿದರು. ಸ್ಥಳ ಲಭ್ಯಗೊಳಿಸಿದರೆ ಅಗತ್ಯದ ಸಹಾ ಯವನ್ನೆಲ್ಲಾ ಕೇಂದ್ರ ಮಾಡುವುದಾಗಿ ಅವರು ಭರವಸೆ ನೀಡಿದರು. ಇದರಿಂದ ರಾಜ್ಯದ ವಿದ್ಯುತ್ ಸಮಸ್ಯೆಗೆ ಬಹುತೇಕ ಪರಿಹಾರ ಕಾಣಬಹುದೆಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.
ಆದರೆ ಈ ವಿಷಯದಲ್ಲಿ ರಾಜ್ಯ ಸರಕಾರ ಯಾವುದೇ ನಿಲುವು ವ್ಯಕ್ತಪಡಿ ಸಿಲ್ಲವೆಂದು ಸೂಚನೆ ಲಭಿಸಿದೆ. ತೃಶೂ ರಿನ ಆದಿರಪಳ್ಳಿ ಹಾಗೂ ಕಾಸರಗೋಡಿನ ಚೀಮೇನಿ ವಿದ್ಯುತ್ ಇಲಾಖೆ ಈ ಯೋಜನೆಗಾಗಿ ಕೇಂದ್ರ ವನ್ನು ಈ ಹಿಂದೆ ಸಂದರ್ಶಿಸಿದಾಗ ನಿರ್ದೇಶಿಸಿದ ಸ್ಥಳಗಳಾಗಿವೆ. ಆದರೆ ಆದಿರಪಳ್ಳಿಯಲ್ಲಿ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ದೊಡ್ಡ ಟೂರಿಸಂ ಕೇಂದ್ರ ಆ ಯೋಜನೆಗೈಯ್ಯು ತ್ತಿರುವುದಾಗಿ ಕೇಂದ್ರ ಸಚಿವ ಸುರೇಶ್ ಗೋಪಿ ಇದರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು. ಸೂಕ್ತವಾದ ಸ್ಥಳವನ್ನು ಪತ್ತೆಹಚ್ಚಬೇಕಾಗಿರುವುದು ರಾಜ್ಯವಾಗಿದೆ ಎಂದೂ ಕೇರಳ ತೀರದಲ್ಲಿ ಥೋರಿಯಂ ಅಡಕವಾಗಿರುವ ಮೊನೋಸೈಟಿಸ್‌ನ ದೊಡ್ಡ ಗಣಿ ಇದೆಯೆಂದು ಕೇಂದ್ರ ಸಚಿವ ತಿಳಿಸಿದ್ದಾರೆ. ರಾಜ್ಯದಲ್ಲಿ ಥೋ ರಿಯಂ ಆಧಾರಿತ ಅಣುಶಕ್ತಿ ನಿಲಯ ಸ್ಥಾಪಿಸಲು ಸಾಧ್ಯವಿದೆ. ಎರಡು ದಿನದ ಸಂದರ್ಶನಕ್ಕೆ ಕೇಂದ್ರ ಸಚಿವರು ರಾಜ್ಯಕ್ಕೆ ತಲುಪಿದ್ದರು. ಕೋವಳಂನಲ್ಲಿ ಮುಖ್ಯ ಮಂತ್ರಿ ಹಾಗೂ ವಿದ್ಯುತ್ ಸಚಿವರನ್ನು ಕೇಂದ್ರ ಸಚಿವರು ಸಂದರ್ಶಿಸಿದರು. ಆದರೆ ಕೇರಳದಲ್ಲಿಯೇ ವಿದ್ಯುತ್ ನಿಲಯ ಬೇಕೆಂದಿಲ್ಲ. ರಾಜ್ಯದ ಹೊರಗೂ ಸ್ಥಾಪಿಸಬಹುದೆಂದು ರಾಜ್ಯ ನಿರ್ದೇಶಿಸಿದೆ.