ಸ್ನೇಹಾಲಯದಲ್ಲಿ ತುಳು ಅಕಾಡೆಮಿ ವತಿಯಿಂದ ‘ಆಟಿದ ಅಟ್ಟಣೆ’

ಮಂಜೇಶ್ವರ: ಕೇರಳ ತುಳು ಅಕಾಡೆಮಿ ವತಿಯಿಂದ ಪಾವೂರು ಸ್ನೇಹಾಲಯದಲ್ಲಿ ಆಟಿದ ಅಟ್ಟಣೆ ಕಾರ್ಯಕ್ರಮ ನಡೆಸಲಾಯಿತು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಮಾತನಾಡಿ, ವಿಶ್ವದೆಲ್ಲೆಡೆ ಇರುವ ತುಳುವರನ್ನು ಒಗ್ಗೂಡಿಸಿ ಬಹತ್ ಕಾರ್ಯಕ್ರಮ ಮಾಡಬೇಕೆಂದು ಕರೆ ನೀಡಿದರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ದೀಪ ಬೆಳಗಿಸಿದರು.

ಉದ್ಯಾವರ ಮಾಡ ಕ್ಷೇತ್ರದ ರಾಜ ಬೆಳ್ಚಪ್ಪಾಡ ಆಶೀರ್ವಚನ ನೀಡಿದರು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ನ್ಯಾಯವಾದಿ ಸುಬ್ಬಯ್ಯ ರೈ ಉದ್ಘಾಟಿಸಿದರು. ವಂ| ಫಾ| ರೆ. ಮೈಕಲ್ ಆಟಿ ತಿಂಗಳಲ್ಲಿ ಹಿಂದೆ ಅನುಭವಿಸುತ್ತಿದ್ದ ಕಷ್ಟದ ಬಗ್ಗೆ ವಿವರಿಸಿದರು. ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉಮೇಶ್ ಸಾಲ್ಯಾನ್, ರಘು ಶೆಟ್ಟಿ, ರಾಮಚಂದ್ರ, ಅಶ್ರಫ್ ಕುಂಜತ್ತೂರು ಶುಭ ಹಾರೈಸಿದರು. ಅಕಾಡೆಮಿಯ ಅಧ್ಯಕ್ಷ ಕೆ.ಆರ್. ಜಯಾನಂದ, ಸದಸ್ಯರಾದ ಚಂದ್ರಮೋಹನ್, ಅಜಿತ್ ಎಂ.ಸಿ. ಲಾಲ್‌ಭಾಗ್, ಉದಯಸಾರಂಗ್ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page