ಸ್ವಾತಂತ್ರ್ಯೋತ್ಸವ: ಯುವಮೋರ್ಛಾ ದಿಂದ ಬೈಕ್ ರ‍್ಯಾಲಿ

ಬದಿಯಡ್ಕ:  75ನೇ ಸ್ವಾತಂತ್ರ್ಯೋ ತ್ಸವದಂಗವಾಗಿರುವ ಮೋರ್ಛಾ ವಿಧಾನಸಭಾ ಸಮಿತಿಯ ನೇತೃತ್ವದಲ್ಲಿ ಮಾವಿನಕಟ್ಟೆಯಿಂದ ಬದಿಯಡ್ಕಕ್ಕೆ ಬೈಕ್ ರ‍್ಯಾಲಿ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಯುವಮೋರ್ಛಾ ಜಿಲ್ಲಾಧ್ಯಕ್ಷ ಅಂಜು ಜೋಸ್ಟಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ ಬೈಕ್ ರ‍್ಯಾಲಿ ಉದ್ಘಾಟಿಸಿದರು. ಸಮಾ ರೋಪ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಶಿವಕೃಷ್ಣ ಭಟ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ, ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳ ಮಜಲ್, ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲಕೃಷ್ಣನ್, ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ ಗೋಸಾಡ, ಸುನಿಲ್ ಪಿ.ಆರ್, ಸುಕುಮಾರ ಕುದ್ರೆಪ್ಪಾಡಿ, ಜಿಲ್ಲಾ ಮೀಡಿಯಾ ಕನ್ವೀನರ್ ಧನಂಜಯನ್ ಮಧೂರು, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಮೊದಲಾದವರು ಭಾಗವಹಿಸಿದರು.

You cannot copy contents of this page