ಹದಿನಾಲ್ಕರ ಬಾಲಕಿಗೆ ಕಿರುಕುಳ: ತಂದೆ, ಸಂಬಂಧಿಕ ಪೋಕ್ಸೋ ಪ್ರಕಾರ  ಕಸ್ಟಡಿಗೆ

ಮಂಜೇಶ್ವರ: ಹದಿನಾಲ್ಕರ ಹರೆಯದ   ಬಾಲಕಿಗೆ ಕಿರುಕುಳ ನೀಡಿ ರುವುದಾಗಿ ದೂರಲಾಗಿದೆ.  ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿ ಕೊಂಡಿದ್ದಾರೆ. ಆರೋಪಿಗಳಾದ ೫೦ರ ಹರೆಯದ ತಂದೆ ಹಾಗೂ ೨೨ರ ಹರೆಯದ  ಸಂಬಂಧಿಕನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಇವರಿಬ್ಬರನ್ನು  ತನಿಖೆಗೊಳ ಪಡಿಸಿದ ಬಳಿಕ ವೈದ್ಯಕೀಯ ತಪಾಸಣೆ ನಡೆಸಿ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಿರುಕುಳಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

 ಇದೇ ವೇಳೆ ಬೇರೊಂದು ಪ್ರಕರಣದಲ್ಲಿ ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದರ ಹರೆಯದ ಬಾಲಕಿ ಕಿರುಕುಳಕ್ಕೆಡೆಯಾದ ಬಗ್ಗೆಯೂ ದೂರುಂಟಾಗಿದೆ. ಈ ಘಟನೆಗೆ ಸಂಬಂಧಿಸಿ ಹತ್ತಿರದ ಸಂಬಂಧಿಕನಾದ ವೃದ್ಧನ ವಿರುದ್ಧ ಹೊಸದುರ್ಗ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page