ಹನುಮಾನ್ ನಗರದಲ್ಲಿ ರಸ್ತೆ ನೀರುಪಾಲು: ವಾಹನ ಸಂಚಾರ ಮೊಟಕುಗೊಂಡು ಸ್ಥಳೀಯರಿಗೆ ಸಮಸ್ಯೆ
ಉಪ್ಪಳ: ಮಂಗಲ್ಪಾಡಿ ಪಂ. ವ್ಯಾಪ್ತಿಯ ಉಪ್ಪಳ ಹನುಮಾನ್ ನಗರದಲ್ಲಿ ಕಳೆದ ವರ್ಷ ನಿರ್ಮಾಣ ಗೊಂಡ ಕಾಂಕ್ರೀಟ್ ರಸ್ತೆ ಸಮುದ್ರಪಾಲಾ ಗಿದೆ. ಇದರಿಂದಾಗಿ ಈ ಪ್ರದೇಶಕ್ಕೆ ವಾಹನ ಸಂಚಾರ ಮೊಟಕುಗೊಂಡಿದ್ದು, ಇಲ್ಲಿನ ನೂರಾರು ಮೀನು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈಗ ೫೦ ಮೀಟರ್ ರಸ್ತೆಯನ್ನು ಸಮುದ್ರ ತನ್ನ ತೆಕ್ಕೆಗೆ ಪಡೆದಿದ್ದು, ಕಡಲ್ಕೊರೆತ ಮುಂದುವರಿದಲ್ಲಿ ರಸ್ತೆ ಇನ್ನಷ್ಟು ಹಾನಿಯಾಗಿ ಪರಿಸರದ ಮನೆಗಳಿಗೂ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈಗ ಉಪ್ಪಳ ಸಹಿತ ವಿವಿಧ ಕಡೆಗಳಿಗೆ ರೈಲ್ವೇ ನಿಲ್ದಾಣದ ಮೂಲಕ ನಡೆದು ಹೋಗ ಬೇಕಾದ ಸ್ಥಿತಿಯಿದ್ದು, ಅಸೌಖ್ಯ ಬಾಧಿತ ರನ್ನು ಆಸ್ಪತ್ರೆಗೆ ಕೊಂಡುಹೋಗಲು ಕೂಡಾ ವ್ಯವಸ್ಥೆಯಿಲ್ಲದಂತಾಗಿದೆ.
ಐಲ ಶಿವಾಜಿನಗರ, ಮಣಿಮುಂಡ, ಮುಸೋಡಿ ಶಾರದಾನಗರದಲ್ಲಿ ಕಡಲ್ಕೊರೆತ ಮುಂದುವರಿಯುತ್ತಿದ್ದು, ಇಲ್ಲಿಯೂ ಹಲವಾರು ಮನೆಗಳು ಅಪಾಯದಂಚಿನಲ್ಲಿದೆ.