ಹಲವಾರು ಪ್ರಕರಣಗಳ ವಾರಂಟ್ ಆರೋಪಿ ಪೈವಳಿಕೆ ನಿವಾಸಿ ಶಾರ್ಪ್‌ಶೂಟರ್ ಆಲಿಮುನ್ನಾ ಸೆರೆ

ತಲಪಾಡಿ: ವಿದ್ಯಾನಗರ, ಕುಂಬಳೆ ಠಾಣೆಗಳಲ್ಲಿ ಕೇಸು ದಾಖಲಾಗಿದ್ದ ದ.ಕ. ಜಿಲ್ಲೆಯಲ್ಲೂ ಹಲವಾರು ಪ್ರಕರಣಗಳಲ್ಲಿ ವಾರಂಟ್ ಆರೋಪಿಯಾಗಿದ್ದ ನಟೋರಿಯಸ್ ಶಾರ್ಪ್ ಶೂಟರ್ ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಆಲಿ ಮುನ್ನಾನನ್ನು ಬಂಧಿಸಲಾಗಿದೆ. ಎಸಿಪಿ ಧನ್ಯಾ ನಾಯಕ್ ನೇತೃತ್ವದ ಕೋಣಾಜೆ ಪೊಲೀಸರ ತಂಡ ಈತನನ್ನು ಸೆಹೆ ಹಿಡಿದಿದೆ.

ಭೂಗತ ಪಾತಕಿಗಳಾದ ರವಿ ಪೂಜಾರಿ, ಕಲಿ ಯೋಗೇಶನ ಸಹಚರ ಹಾಗೂ ವಿವಿಧ ಠಾಣೆಗಳಲ್ಲಿ ಬಂಧನ ವಾರಂಟ್ ಈತ ಎದುರಿಸುತ್ತಿದ್ದ. ೨೦೧೦ ಮತ್ತು ೨೦೧೩ರಲ್ಲಿ ಜಿಲ್ಲೆಯ ಬೇವಿಂಜೆ ಪಿಡಬ್ಲ್ಯೂಡಿ ಗುತ್ತಿಗೆದಾರನ ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಸಂಜೀವ ಶೆಟ್ಟಿ ಸಿಲ್ಕ್ ಮಳಿಗೆ, ಪುತ್ತೂರು ರಾಜಧಾನಿ ಜ್ಯುವೆಲ್ಲರ್ಸ್‌ನಲ್ಲಿ ಶೂಟೌಟ್ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಈತನನ್ನು ಈಗ ಸೆರೆ ಹಿಡಿಯಲಾಗಿದೆ.

RELATED NEWS

You cannot copy contents of this page