ಹಾರ್ಮೋನಿಯಂ ವಾದಕ ನಿಧನ
ಹೊಸದುರ್ಗ: ಅಸೌಖ್ಯ ತಗಲಿ ಸಾಂತ್ವನ ಪರಿಚರಣೆ ಚಿಕಿತ್ಸೆಯಲ್ಲಿದ್ದ ಹಾರ್ಮೋನಿಸ್ಟ್ ವಿ. ಶ್ರೀಧರನ್ (73) ನಿಧನ ಹೊಂದಿದರು. ಪಯ್ಯನ್ನೂರು ಶಿವ ಕ್ಷೇತ್ರ ಬಳಿಯ ವಸತಿಗೃಹದಲ್ಲಿ ವಾಸಿಸುತ್ತಿದ್ದ ಇವರನ್ನು ಅಕ್ಟೋಬರ್ ೧೩ರಂದು ಪಯ್ಯನ್ನೂರು ಪೊಲೀಸರ ನಿರ್ದೇಶ ಪ್ರಕಾರ ಹೋಪ್ಗೆ ದಾಖಲಿ ಸಲಾಗಿತ್ತು. ನಿನ್ನೆ ಇವರು ಮೃತಪಟ್ಟರು. ಹಲವು ಕಾಲ ಹಾರ್ಮೋನಿಯಂ ದುರಸ್ತಿ ನಡೆಸುತ್ತಿದ್ದ ಇವರು ಪಾಲಕ್ಕಾಡ್ ಸಿ.ಎಸ್. ಕೃಷ್ಣನಯ್ಯರ್ರಿಂದ ಸಂಗೀತ ಅಭ್ಯಸಿಸುತ್ತಿದ್ದರು. ಕೇರಳ ಕಲಾಮಂಡಲ ದಲ್ಲಿ ಹಾರ್ಮೋನಿಯಂ ದುರಸ್ತಿ ನಡೆಸುವ ಉದ್ಯೋಗದಲ್ಲಿದ್ದರು. ಗಾನಗಂಧರ್ವ ಜೇಸುದಾಸ್, ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲ್ನಾಥ್ ಸಹಿತದ ಸಂಗೀತಜ್ಞರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಆದರೆ ಇವರ ಸಂಬಂಧಿಕರ ಬಗ್ಗೆ ಮಾಹಿತಿ ಲಭ್ಯವಿಲ್ಲ.
ಇವರ ಬಗ್ಗೆ ತಿಳಿದವರು ಪರಿಯಾರಂ ಪೊಲೀಸ್ ಠಾಣೆ ಅಥವಾ ಪಿಲಾತರ ಹೋಪ್ ರಿಹಾಬಿಲಿಟೇಶನ್ ಸೆಂಟರ್ನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.