ಹಾಲಿನ ಟ್ಯಾಂಕರ್‌ಗೆ ಬಸ್ ಢಿಕ್ಕಿ: 18 ಮಂದಿ ಸಾವು

ಉನ್ನಾವೋ: ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಇಂದು ಮುಂಜಾನೆ ಡಬ್ಬಲ್ ಡೆಕ್ಕರ್ ಬಸ್ಸು ಹಾಲಿನ ಟ್ಯಾಂಕರ್‌ನ ಹಿಂದುಗಡೆ  ಢಿಕ್ಕಿ ಹೊಡೆದ ಪರಿಣಾಮ 18 ಮಂದಿ ಬಸ್ ಪ್ರಯಾಣಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಲ್ಲಾಗಿ ದಾಖಲಿಸಲಾಗಿದೆ.

ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್  ಹೈವೇಯಲ್ಲಿ  ಈ ಭೀಕರ ಅಪಘಾತ ಸಂಭವಿಸಿದೆ. ಬಸ್ಸು ಬಿಹಾರ ಶಿವಗಢದಿಂದ ದೆಹಲಿಗೆ ಹೋಗುತ್ತಿತ್ತು. ಇದು ಡಬ್ಬಲ್ ಡೆಕ್ಕರ್ ಸ್ಲೀಪರ್ ಬಸ್ ಆಗಿದೆ.

ಬೆಹ್ತಾ ಮುಜಾವರ್ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಏರ್ ಸ್ಟ್ರಿಫ್‌ನಲ್ಲಿ ಇಂದು ಮುಂಜಾನೆ ೫.೧೫ರ ವೇಳೆ ಅದು ಟ್ಯಾಂಕರ್ ವಾಹನದ ಹಿಂದುಗಡೆ ಢಿಕ್ಕಿ ಹೊಡೆದಿದೆ.

You cannot copy contents of this page