ಹಿರಿಯ ಕಾಂಗ್ರೆಸ್ ನಾಯಕಿ ನಿಧನ
ಪೈವಳಿಕೆ: ಪೈವಳಿಕೆ ಮಂಡಲ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದ ದಿ| ಗಣಪತಿ ರಾವ್ ಕುರುಡಪದವು ಇವರ ಪತ್ನಿ ಭಾಗೀರಥಿ ಅಮ್ಮ (89) ನಿಧನ ಹೊಂದಿದರು. ಮಹಿಳಾ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷೆಯಾಗಿ ಹಾಗೂ ಪೈವಳಿಕೆ ಸಹಕಾರಿ ಬ್ಯಾಂಕ್‌ನ ನಿರ್ದೇಶಕಿಯಾಗಿದ್ದರು. ಮಹಿಳೆಯರು ಸಾರ್ವಜನಿಕ ಹಾಗೂ ಉದ್ಯೋಗ ರಂಗದಲ್ಲಿ ತೊಡಗಿಸಿ ಕೊಳ್ಳದ 60ರ ದಶಕದಲ್ಲಿಯೇ ಪೋಸ್ಟ್ ಮಾಸ್ತರ್ ಆಗಿ ಕೆಲಸಕ್ಕೆ ಸೇರಿದ ಇವರು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ನೀಡಿದ್ದರು. ಮಹಿಳಾ ಸಂಘ, ವಾಚನಾಲಯ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.
ಮೃತರು ಮಕ್ಕಳಾದ ಶ್ರೀಕುಮಾರಿ, ಉಷಾಕುಮಾರಿ, ವೀಣಾ ಕುಮಾರಿ, ಶಿವಪ್ರಸಾದ್, ಅಳಿಯಂದಿರಾದ ಸುಂದರ, ಕರಿವೆ ಳ್ಳೂರು ವಿಜಯನ್ (ಆರ್‌ಎಸ್‌ಪಿ ಮುಖಂಡ), ರಾಧಾಕೃಷ್ಣನ್,ಸೊಸೆ ಭವಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತರ ಮನೆಗೆ ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್, ಉಪಾಧ್ಯಕ್ಷ ಸುಬ್ರಾಯ ಸಾಯ, ಶಾಜಿ, ರಾಘವೇಂದ್ರ ಭಟ್, ಶಿವರಾಮ ಶೆಟ್ಟಿ ಭೇಟಿ ನೀಡಿ ಸಂತಾಪ ಸೂಚಿಸಿದರು.