ಹಿರಿಯ ದೈವನರ್ತಕ ನಿಧನ

ಉಪ್ಪಳ: ಬಂದ್ಯೋಡು ಬಳಿಯ ಹೇರೂರು ನಿವಾಸಿ, ಹಿರಿಯ ದೈವನರ್ತಕ, ಪಂಚಾಯತ್ ಮಾಜಿ ಸದಸ್ಯ ಐತ್ತಪ್ಪ ನಲಿಕೆ (66) ನಿಧನರಾದರು. ಭಾನುವಾರ ಮುಂಜಾನೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಕೂಡಲೇ ಮಂಗಳೂರಿಗೆ ಸಾಗಿಸುವ ಮಧ್ಯೆ ನಿಧನರಾದರು. ಮಂಗಲ್ಪಾಡಿ ಪಂಚಾಯತ್‌ನ ಮಾಜಿ ಬಿಜೆಪಿ ಸದಸ್ಯರಾಗಿದ್ದರು. ಕೇರಳ ತುಳು ಅಕಾಡೆಮಿ ವತಿಯಿಂದ ಜನವರಿಯಲ್ಲಿ ಎಡನೀರು ಮಠದಲ್ಲಿ ನಡೆದ ಹಿರಿಯ ದೈವನರ್ತಕರಿಗೆ ಸನ್ಮಾನ ಸಮಾರಂಭದಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ÀÄÈತರು ಪತ್ನಿ ಲೀಲಾ, ಪುತ್ರ ಮಹೇಶ, ಸೊಸೆ ಶಶಿಕಲಾ, ಸಹೋದರ, ಸಹೋದರಿಯರಾದ ದೇವಕಿ, ಸುಮತಿ, ಪೂವಪ್ಪ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ.ಎಂ. ಎಲ್, ನೇತಾರರಾದ ವಸಂತ ಕುಮಾರ್ ಮಯ್ಯ, ವಿಜಯ ಕುಮಾರ್ ರೈ, ಸುನಿಲ್, ಸುರೇಶ್ ಶೆಟ್ಟಿ ಹೇರೂರು, ಜಯರಾಮ ಶೆಟ್ಟಿ, ಉದಯ ಗಾಂಭೀರ್, ಕೆ.ಪಿ ವಲ್ಸರಾಜ್, ಮಂಗ ಲ್ಪಾಡಿ ಪಂ. ಉಪಾಧ್ಯಕ್ಷ ಯೂಸಫ್ ಹೇರೂರು, ಸದಸ್ಯ ಕಿಶೋರ್ ಕುಮಾರ್ ಬಂದ್ಯೋಡು, ಮಾಜಿ ಸದಸ್ಯೆ ರೇವತಿ, ದಕ್ಷಿಣ ಕನ್ನಡ ಜಿಲ್ಲಾ ಪಾಣಾರ ಯಾನೆ ನಲಿಕೆ ಸಮಾಜ ಸೇವಾಸಂಘದ ಅಧ್ಯಕ್ಷ ಪದ್ಮನಾಭ ಮೂಡು ಬಿದಿರೆ, ಮಂಜೇಶ್ವರ ವಲಯ ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಸೋಮೇಶ್ವರ ಹಾಗೂ ಸಂಘದ ಪದಾಧಿ ಕಾರಿಗಳು ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.

You cannot copy contents of this page