ಹುಚ್ಚುನಾಯಿ ಕಡಿತ: ಗಾಯಗೊಂಡ ಮಹಿಳೆಗೆ ಪರಿಯಾರಂನಲ್ಲಿ ಚಿಕಿತ್ಸೆ

ಕುಂಬಳೆ: ಹುಚ್ಚು ರೋಗ ಬಾಧಿಸಿದ ನಾಯಿಯ ಕಡಿತದಿಂದ ಗಾಯಗೊಂಡ ಮಹಿಳೆಗೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್‌ರ ಸೂಕ್ತ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ತಜ್ಞ ಚಿಕಿತ್ಸೆಯ ಏರ್ಪಾಡು ಮಾಡ ಲಾಗಿದೆ. ಇದರಂತೆ ಕುಂಟಂಗೇರಡ್ಕ ವೆಲ್ಫೇರ್ ಶಾಲೆ ಬಳಿಯ ಎಸ್.ಸಿ. ಕಾಲನಿ ನಿವಾಸಿ ಸುನಿತ (೪೩) ಅವರನ್ನು ಪರಿಯಾರಂ ಮೆಡಿಕಲಾ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಇವರಿಗೆ ಮೊನ್ನೆ ಮನೆ ಸಮೀಪ ಹುಚ್ಚು ನಾಯಿ ಕಡಿದಿತ್ತು. ಇದರಿಂದ ಮುಖ ಸಹಿತ ವಿವಿಧೆಡೆ ಗಂಭೀರ ಗಾಯಗೊಂಡ ಸುನಿತರನ್ನು ಕಾಸರಗೋ ಡಿನ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಲ್ಲಿ ಸೂಕ್ತ ಚಿಕಿತ್ಸೆ ಲಭಿಸಲಿಲ್ಲ. ಮಾತ್ರವಲ್ಲದೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳ್ಳುವಂತೆ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಸುನಿತ ಬೇರೆ ದಾರಿಯಿಲ್ಲದೆ ಮನೆಗೆ ಮರಳಿದರು.  ಈ ವಿಷಯ ಗಮನಕ್ಕೆ   ಬಂದ ಶಾಸಕ ಎ.ಕೆ.ಎಂ. ಅಶ್ರಫ್ ಘಟನೆಗೆ ಸಂಬಂಧಿಸಿ ತಕ್ಷಣ ತಲುಪಿದ್ದಾರೆ. ಶಾಸಕ ಜಿಲ್ಲಾ ವೈದ್ಯಾಧಿಕಾರಿಯನ್ನು ಸಂಪರ್ಕಿಸಿದ ಬಳಿಕ ಸರಕಾರಿ ಆಂಬುಲೆನ್ಸ್‌ನಲ್ಲಿ ಸುನಿತರನ್ನು ಪರಿಯಾರಂಗೆ  ಕೊಂಡೊಯ್ದು ತಜ್ಞ ಚಿಕಿತ್ಸೆ ದೊರಕಿಸುವ ವ್ಯವಸ್ಥೆ ಮಾಡಲಾಗಿದೆ.

ಸುನಿತ ಸಹಿತ ಎಂಟು ಮಂದಿಗೆ ಹುಚ್ಚು ನಾಯಿ ಕಡಿದಿತ್ತು. ಆ ನಾಯಿಯನ್ನು ನಾಗರಿಕರು ಬಳಿಕ ಹೊಡೆದುಕೊಂದು ಹೂತು ಹಾಕಿದರು. ಹುಚ್ಚು ಹಿಡಿದ ನಾಯಿಯೆಂದು ಹೇಳಲಾಗುತ್ತಿರುವ  ಹಿನ್ನೆಲೆಯಲ್ಲಿ  ವೈದ್ಯರುಗಳ ತಂಡ ನಿನ್ನೆ ಕುಂಟಂಗೇರಡ್ಕಕ್ಕೆ ತಲುಪಿದ್ದು,  ಹೂತು ಹಾಕಿದ ನಾಯಿಯನ್ನು ಹೊರತೆಗೆದು ತಜ್ಞ ತಪಾಸಣೆಗೆ ಕ್ರಮ ಕೈಗೊಂಡಿದ್ದಾರೆ. ಇದರಂತೆ ನಾಯಿಯ ಕಳೇಬರವನ್ನು  ಪೆಟ್ಟಿಗೆಯಲ್ಲಿರಿಸಿ ನಿನ್ನೆ  ಕಾಸರಗೋಡಿಗೆ ತಲುಪಿಸಲಾಗಿದೆ. ಇಂದು ಕಣ್ಣೂರಿಗೆ ಕೊಂಡೊಯ್ದು ತಪಾಸಣೆ ನಡೆಸಲಾಗುವುದು. ನಾಯಿಗೆ ಹುಚ್ಚುರೋಗ ಬಾಧಿಸಿದೆಯೇ, ಅದು ಹೇಗೆ ಹರಡಿದೆ, ರೋಗದ ಗಂಭೀರತೆ ಹೇಗಿದೆಯೆಂದು ತಿಳಿಯುವುದು ಇದರ ಉದ್ದೇಶವಾಗಿದೆ.

You cannot copy contents of this page