ಹೂವು ಕೊಯ್ಯಲು ಹೋದ ಮಹಿಳೆಯನ್ನು ಕೊಂದು ಕಿವಿಯೋಲೆಗಳನ್ನು ಕಿತ್ತು ಪರಾರಿ

ತಿರುವನಂತಪುರA: ಹೂವು ಕೊಯ್ಯಲು ಹೋದ ಮಹಿಳೆಯನ್ನು ಕೊಂದು ಕಿವಿಯೋಲೆಗಳನ್ನು ಕಿತ್ತುಕೊಂಡು ಹೋದ ಘಟನೆ ನಡೆದಿದೆ.ಕೊಯಿತ್ತೂರ್‌ಕೋಣಂ ಪೋತನ್‌ಕೋಟ್‌ನ ಮಣಿಕಂಠ ಭವನ ನಿವಾಸಿ ತಂಗಮಣಿ (65) ಕೊಲೆಯಾದವರು. ಇಂದು ಬೆಳಿಗ್ಗೆ ತಂಗಮಣಿ ಅವರ ಮೃತದೇಹ ಮನೆಯ ಸಮೀಪ ಪತ್ತೆಯಾಗಿದೆ. ರವಿಕೆ ಹರಿದಿದ್ದು, ಲುಂಗಿ ಮೃತದೇಹಕ್ಕೆ ಹೊದೆಸಲಾಗಿತ್ತು. ಮುಖದ ಮೇಲೆ ಗಾಯದ ಗುರುತುಗಳಿವೆ. ಮೃತದೇಹದ ಬಳಿ ಹೂವುಗಳೂ ಬಿದ್ದಿರುವುದು ಕಂಡುಬAದಿದೆ. ಹೂವು ಕೀಳಲು ಹೋಗಿದ್ದ ತಂಗಮಣಿ ಮೇಲೆ ಹಲ್ಲೆ ನಡೆಸಿ ಕೊಂದು ಕಿವಿಯೋಲೆ ಕಿತ್ತುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ತಂಗಮಣಿಯವರ ಮೃತದೇಹವನ್ನು ಮೊದಲು ತಂಗಿ ನೋಡಿದ್ದು, ಮಾಹಿತಿ ಪಡೆದ ಪೊಲೀಸರು ಮತ್ತು ಶ್ವಾನದಳ ಘಟನಾ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದೆ.

You cannot copy contents of this page