ಹೃದಯಾಘಾತ: ಬಿಜೆಪಿ ಕಾರ್ಯಕರ್ತ ನಿಧನ
ಅಡೂರು: ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ. ನಾಯ್ಕ್‌ರ ಸಹೋದರ ಸಕ್ರಿಯ ಬಿಜೆಪಿ ಕಾರ್ಯಕರ್ತ ಅಡೂರು ಬಲ್ಲಕಾನ ನಿವಾಸಿ ಪ್ರದೀಪ್ ಕುಮಾರ್ (42) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಇವರಿಗೆ ಮನೆಯಲ್ಲಿ ಎದೆನೋವು ಕಂಡು ಬಂದಿತ್ತು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದ ಮಧ್ಯೆ ನಿಧನ ಸಂಭವಿಸಿದೆ.
ಕೃಷಿಕರಾಗಿರುವ ಇವರು ಬಿಜೆಪಿ ದೇಲಂಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾಗಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ಮೃತರು ತಂದೆ ಜಯನಾರಾಯಣ ನಾಯ್ಕ್, ತಾಯಿ ಭಾಗೀರಥಿ, ಸಹೋದರ ಪ್ರಮೋದ್ ಕುಮಾರ್, ಇತರ ಸಹೋದರಿಯರಾದ ಪೂರ್ಣಿಮಾ, ಪ್ರತಿಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.