ಹೃದಯಾಘಾತ: ಯುವಕ ನಿಧನ

ಉಪ್ಪಳ: ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಗೆ ಕಳೆದುಕೊಂಡು ಹೋಗುವ ಮಧ್ಯೆ ಯುವಕ ನಿಧನಹೊಂದಿದ ಘಟನೆ ನಿನ್ನೆ ಜೋಡುಕಲ್ಲಿನಲ್ಲಿ ಸಂಭವಿಸಿದೆ. ನಿನ್ನೆ ಮುಂಜಾನೆ ಮನೆಯಲ್ಲಿ ಸ್ಥಳೀಯ ನಿವಾಸಿ ಕೃಷ್ಣಪ್ಪ ಪೂಜಾರಿ ದೇರಂಬಳ ಇವರ ಪುತ್ರ ಸಂತೋಷ್ (೩೮)ರಿಗೆ ಹೃದಯಾ ಘಾತ ಉಂಟಾಗಿದೆ. ಕೂಡಲೇ ಉಪ್ಪ ಳದ ಖಾಸಗಿ ಆಸ್ಪತ್ರೆಗೆ ನಡೆದು ಕೊಂಡು ಹೋಗುವ ಮಧ್ಯೆ ನಿಧನ ಸಂಭವಿಸಿದೆ. ಅವಿವಾಹಿತರಾದ ಮೃತ ರು ತಂದೆ, ತಾಯಿ ಪದ್ಮಾವತಿ, ಸಹೋದರರಾದ  ಜಗದೀಶ, ಸುವರ್ಣ, ಸಂಪತ್ ಕುಮಾರ್, ವಿನೋ ದ್, ಸಹೋದರಿ ಆಶಾಲತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page