ಹೆದ್ದಾರಿ ಕಾಮಗಾರಿ ಅಭಿವೃದ್ಧಿ ಉಪ್ಫಳದಲ್ಲಿ ಫ್ಲೈಓವರ್ ನಿರ್ಮಾಣ ಆರಂಭ
ಉಪ್ಪಳ: ತಲಪಾಡಿಯಿಂದ ಕಾಸರಗೋಡು ಮಧ್ಯೆ ಹೆದ್ದಾರಿ ಕಾಮ ಗಾರಿ ಅತೀ ವೇಗದಿಂದ ನಡೆಯುತ್ತಿ ರುವಂತೆ ಉಪ್ಪಳ ಪೇಟೆಯಲ್ಲಿ ಪ್ಲೆöÊ ಓವರ್ ನಿರ್ಮಾಣದ ಕೆಲಸ ಆರಂಭಿ ಸಲಾಗಿದೆ. ಇಲ್ಲಿನ ಬಸ್ ನಿಲ್ದಾಣ ಬಳಿಯಿಂದ ಸುಮಾರು 200 ಮೀಟರ್ ಪ್ಲೆöÊ ಓವರ್ ನಿರ್ಮಾಣ ಗೊಳ್ಳಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕಾಮಗಾರಿಗೆ ಪೇಟೆಯ ಒಂದು ಭಾಗದ ರಸ್ತೆಯನ್ನು ಮುಚ್ಚುಗಡೆಗೊಳಿಸಲಾಗಿದ್ದು, ಪಿಲ್ಲರ್ ನ ಕೆಲಸಗಳು ಭರದಿಂದ ನಡೆಯುತ್ತಿದೆ. ಇದರಿಂದ ರಸ್ತೆ ಯಲ್ಲಿ ಸ್ಥಳವಕಾಶದ ಸಮಸ್ಯೆಯಿಂದ ವಾಹನ ಸಂಚಾರದ ವೇಳೆ ಸಮಸ್ಯೆಗೆ ಕಾರಣವಾಗುತ್ತಿದೆ. ಉಪ್ಪಳ ಪೇಟೆಯಲ್ಲಿ ಪೊಲೀಸರು ವಾಹನಗಳನ್ನು ನಿಯಂತ್ರಿಸುತ್ತಿರುವುದು ಸಾರ್ವಜನಿಕರಲ್ಲಿ ಅಲ್ಪ ನೆಮ್ಮದಿ ಉಂ ಟುಮಾಡುತ್ತಿದೆ. ತಲಪಾಡಿ ಯಿಂದ ಪೊಸೋಟು ತನಕ ಸರ್ವೀಸ್ ರಸ್ತೆ, ಹೆದ್ದಾರಿ ರಸ್ತೆಗಳು ನಿರ್ಮಾಣ ಪೂರ್ತಿ ಗೊಂಡಿದೆ. ಸಣ್ಣಪುಟ್ಟ ಕೆಲಸಗಳು ನಡೆ ಯುತ್ತಿದೆ. ಪೊಸೋಟು ಒಂದು ಭಾಗದ ಸೇತುವೆ ನಿರ್ಮಾಣ ಪೂರ್ತಿಗೊಂಡು ಸಂಚಾರಕ್ಕೆ ತೆರೆದಿದೆ.
ಉಪ್ಪಳ ಸೇತುವೆಗೆ ಬೃಹತ್ ಯಂತ್ರದ ಮೂಲಕ ಭೀಮ್ನ್ನು ಅಳವಡಿಸುವ ಕೆಲಸ ಪೂರ್ತಿಗೊಂಡಿದ್ದು, ಕಾಂಕ್ರೀಟ್ ಹಾಕುವ ಕೆಲಸ ನಡೆಯುತ್ತಿದೆ. ಕುಕ್ಕಾರ್, ಶಿರಿಯ, ಕುಂಬಳೆ, ಮೊಗ್ರಾಲ್, ಎರಿಯ ಸೇತುವೆಗಳ ನಿರ್ಮಾಣ ಕೆಲಸಗಳು ನಡೆಯುತ್ತಿದೆ.