ಹೈಯರ್ ಸೆಕೆಂಡರಿ ಫಲಿತಾಂಶ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಉತ್ತಮ ಸಾಧನೆ, ವಾಣಿಜ್ಯ ವಿಭಾಗಕ್ಕೆ ನೂರು ಶೇಕಡಾ ಫಲಿತಾಂಶ

ಬದಿಯಡ್ಕ: 2024-25 ನೆಯ ಸಾಲಿನ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ರೀರಂಜಿನಿ ಎಸ್ 1200 ರಲ್ಲಿ 1200 ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ.ಶಾಲೆಯ 12 ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯದಲ್ಲಿ ಎ ಪ್ಲಸ್ ಅಂಕ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಶ್ರೀರಂಜಿನಿ, ಪ್ರಜ್ಞಾ.ಕೆ, ಸ್ಕಂದಾ ಶರ್ಮ ಜೆ.ಕೆ, ನಭಿಸತುಲ್ ಶಿಜಾನ, ಅನುರಾಗ್, ರಕ್ಷಿತಾ.ಬಿ ಹಾಗೂ ಶಿವಾನಿ.ಕೆ . ಹ್ಯುಮಾನಿಟೀಸ್ ವಿಭಾಗದಲ್ಲಿ ಸುಖಿ.ಬಿ, ಸಂಕೇತ್.ಎಸ್,ಸ್ವರ್ಣ ಲಕ್ಷ್ಮಿ ಜಿ ಶೆಟ್ಟಿ,ಕಾವ್ಯಶ್ರೀ,ಆಯಿಶತ್ ನಿಹಾ ಎಂಬೀ ವಿದ್ಯಾರ್ಥಿಗಳು ಎಲ್ಲಾ ಆರು ವಿಷಯಗಳಲ್ಲೂ ಎ ಪ್ಲಸ್ ಅಂಕ ಹಾಗೂ 10 ವಿದ್ಯಾರ್ಥಿಗಳು 5 ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್, ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

You cannot copy contents of this page