ಹೈಸ್ಕೂಲ್ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆ

ಕಾಸರಗೋಡು: ಸ್ವಾತಂತ್ರ‍್ಯ ದಿನಾಚರಣೆಯಂಗವಾಗಿ ಕಾಸರಗೋಡು ರೋಟರಿ ಹಾಗೂ ಜಿಲ್ಲಾ ಮಾಹಿತಿ ಕೇಂದ್ರ ಜಂಟಿಯಾಗಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ, ರಾಷ್ಟ್ರೀಯ ಗೀತೆ ಸ್ಪರ್ಧೆ ನಡೆಸುತ್ತದೆ. ಈ ತಿಂಗಳ 13ರಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಕಾಸರಗೋಡು ರೋಟರಿ ಭವನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸ್ಪರ್ಧೆಗೆ ಎಂಟ್ರಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಈ ತಿಂಗಳ 9 ಆಗಿದ್ದು, ಒಂದು ತಂಡದಲ್ಲಿ 7 ಮಂದಿ ಭಾಗವಹಿಸಬಹುದು. ಪ್ರತೀ ತಂಡಕ್ಕೆ 2 ಸ್ಪರ್ಧೆಗಳಲ್ಲೂ ಭಾಗವ ಹಿಸಲು ಅವಕಾಶವಿದೆ. ಸಂಗೀತ ಉಪಕರಣಗಳನ್ನು ಉಪಯೋಗಿಸಿ, ಇಲ್ಲದೆಯೂ ಸ್ಪರ್ಧೆಯಲ್ಲಿ ಭಾಗವಹಿಸಬಹು ದಾಗಿದೆ. 5000, 3000, 2000 ಎಂಬೀ ಕ್ರಮದಲ್ಲಿ ಅನುಕ್ರಮವಾಗಿ 1ರಿಂದ 3ರವರೆಗಿನ ಸ್ಥಾನದವರಿಗೆ ನಗದು ಬಹುಮಾನ ನೀಡಲಾಗುವುದು.

RELATED NEWS

You cannot copy contents of this page