ಹೊಲಿಗೆದಾರರ ಸಂಘಟನೆಯ ಮುಖಂಡ ಸುಂದರನ್ ಕೋಹಿನೂರ್ ನಿಧನಕ್ಕೆ ಸಂತಾಪ

ಕಾಸರಗೋಡು: ರಾಜ್ಯ ಹೊಲಿಗೆದಾರರ ಸಂಘಟನೆಯ ಸಂಸ್ಥಾಪಕ ಮುಖಂಡ ಹಾಗೂ ಕೆಎಸ್‌ಟಿಎ ರಾಜ್ಯ ಮಾಜಿ  ಉಪಾಧ್ಯಕ್ಷ ಸುಂದರನ್ ಕೋಹಿನೂರ್‌ರವರ ನಿಧನಕ್ಕೆ ಸಂಘಟನೆಯ ಜಿಲ್ಲಾ ಸಮಿತಿ ಸಂತಾಪ ಸೂಚಿಸಿತು. ಈ ಬಗ್ಗೆ ನಡೆದ ಸಭೆಯಲ್ಲಿ ಮಧೂರು ಪಂಚಾಯತ್ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ, ಕೆಎಸ್‌ಟಿಎ ಜಿಲ್ಲಾ ಕಾರ್ಯದರ್ಶಿ  ಪಿ.ಯು. ಶಂಕರನ್,  ಮಾಜಿ ರಾಜ್ಯಾಧ್ಯಕ್ಷ ರಾಮನ್ ಚೆನ್ನಿಕ್ಕರ, ರಾಜ್ಯ ಸಮಿತಿ ಸದಸ್ಯ ಮೋಹನ್‌ದಾಸ್ ಕುಂಬಳೆ, ಶಂಕರನ್ ಅಣಂಗೂರು, ಘಟಕಾಧ್ಯಕ್ಷ ರಮೇಶ್ ಓಸಾರ್, ಜಿಲ್ಲಾಧ್ಯಕ್ಷ ಸುರೇಶ್ ಭಟ್, ಉಪಾಧ್ಯಕ್ಷ ಉದಯನ್ ಮಾತನಾಡಿದರು.

RELATED NEWS

You cannot copy contents of this page