ಹೊಳೆಯಲ್ಲಿ ನಾಪತ್ತೆಯಾಗಿದ್ದ ಬೆಳಗಾವಿ ನಿವಾಸಿಯ ಮೃತದೇಹ ಪತ್ತೆ
ಹೊಸದುರ್ಗ: ಪಾಣತ್ತೂರು ಮಂಞಡ್ಕದ ಹೊಳೆಯಲ್ಲಿ ನಾಪತ್ತೆಯಾ ಗಿದ್ದ ಕರ್ನಾಟಕದ ಬೆಳಗಾವಿ ನಿವಾಸಿ ದುರ್ಗಪ್ಪ (18) ಎಂಬಾತನ ಮೃತದೇಹ ಪತ್ತೆಯಾಗಿದೆ. ನಿನ್ನೆ ಪಾಣತ್ತೂರು ವಟ್ಟಕುಂಡ್ ಎಂಬಲ್ಲಿನ ಹೊಳೆಯಲ್ಲಿ ಮೃತದೇಹ ಕಂಡು ಬಂದಿದೆ. ಇದೇ ವೇಳೆ ದುರ್ಗಪ್ಪ ಸಂಚರಿಸಿದ ದ್ವಿಚಕ್ರ ವಾಹನ ಪತ್ತೆಯಾಗಿಲ್ಲ. ಪ್ಲಾಂಟೇಶನ್ ಕಾರ್ಪರೇಶನ್‌ನ ಪಾಣತ್ತೂರಿನ ತೋಟದಲ್ಲಿ ಕೆಲಸಕ್ಕಾಗಿ ಬಂದಿದ್ದ ದುರ್ಗಪ್ಪ ಕಳೆದ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದನು.
ಕೆಲಸ ಸ್ಥಳದಿಂದ ಮಧ್ಯಾಹ್ನ ಊಟಕ್ಕಾಗಿ ತೆರಳುತ್ತಿದ್ದಾಗ ಮಂಞಡ್ಕ ಹೊಳೆ ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದನು. ಅಂದಿನಿಂದಲೇ ಹೊಳೆಯಲ್ಲಿ ಶೋಧ ಆರಂಭಿಸಲಾಗಿತ್ತು. ನಾಗಪ್ಪ ನದಾತ್- ದ್ಯಾಮವ್ವ ಮದ ದಂಪತಿ ಪುತ್ರನಾದ ಮೃತನು ಸಹೋದರ ಅಭಿಷೇಕ್, ಸಹೋದರಿ ಲಕ್ಷ್ಮಿ ಮೊದಲಾದವರನ್ನು ಅಗಲಿದ್ದಾನೆ.