ಹೊಸಂಗಡಿ ರೈಲ್ವೇ ಗೇಟ್ ಮುಚ್ಚುಗಡೆ : ನವೀಕರಣ ಕಾಮಗಾರಿ ಆರಂಭ

ಹೊಸಂಗಡಿ: ಹೊಸಂಗಡಿ ರೈಲ್ವೇ ಗೇಟ್ ದುರಸ್ತಿ ಹಿನ್ನೆಲೆಯಲ್ಲಿ ನಿನ್ನೆಯಿಂದ ಒಂದು ವಾರ ತನಕ ಮುಚ್ಚಲಾಗುವುದು. ಮಂಜೇಶ್ವರ ಒಳಪೇಟೆಗೆ ಈ ಮೂಲಕ ಸಾಗುತ್ತಿದ್ದ ಬಸ್ ಸಹಿತ ವಾಹನಗಳು ಉದ್ಯಾವರ ೧೦ನೇ ಮೈಲ್‌ನಲ್ಲಿರುವ ಅಂಡರ್‌ಪಾಸ್ ಮೂಲಕ ಸಂಚರಿಸಬೇಕಾಗಿದೆ. ರೈಲ್ವೇ ಗೇಟ್‌ಗೆ ಇಂಟರ್‌ಲಾಕ್ ಅಳವಡಿಸಿ ಗೇಟನ್ನು ನವೀಕರಿಸುವ ಕಾಮಗಾರಿಗೆ ನಿನ್ನೆ ಚಾಲನೆ ನೀಡಲಾಗಿದೆ.

ಒಳಪೇಟೆಯಲ್ಲಿ ಮಂಜೇಶ್ವರ ಪೊಲೀಸ್ ಠಾಣೆ, ಬ್ಲೋಕ್ ಪಂಚಾಯತ್, ಪಂಚಾಯತ್, ವಿಲ್ಲೇಜ್ ಆಫೀಸ್ ಸಹಿತ ಸರಕಾರಿ ಕಚೇರಿಗಳು, ಆರಾಧನಾಲಯಗಳಿದ್ದು, ಇದುವರೆಗೆ ರೈಲ್ವೇ ಗೇಟ್ ಮೂಲಕ ಸಂಚರಿಸುತ್ತಿದ್ದ ವಾಹನಗಳು ಒಂದು ವಾರ ಸುತ್ತು ಬಳಸಿ ಸಂಚರಿಸಬೇಕಾಗಿದೆ.  ಜನರ ಸಮಸ್ಯೆಯನ್ನು ಮನಗಂಡು ಕಾಮಗಾರಿಯನ್ನು ಶೀಘ್ರವೇ ಮುಗಿಸಿ ರೈಲ್ವೇ ಗೇಟ್ ತೆರೆದುಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

You cannot copy contents of this page