ಹೊಸಂಗಡಿ ರೈಲ್ವೇ ಗೇಟ್: ಸಂಕಷ್ಟಕ್ಕೀಡಾಗುತ್ತಿರುವ ಸಾರ್ವಜನಿಕರು; ಹೊಸ ಗೇಟ್ ಚಾಲನೆಗೆ ವಿಳಂಬ

ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಪದೇ ಪದೇ ಹಾನಿಗೀಡಾಗುತ್ತಿ ರುವುದರಿಂದ ಬಂಗ್ರಮAಜೇಶ್ವರ ಸಹಿತ ವಿವಿಧ ಪ್ರದೇಶಗಳಿಗೆ ತೆರಳಬೇಕಾ ದವರು ಸಮಸ್ಯೆಗೀಡಾಗುತ್ತಿದ್ದಾರೆ. ನಿನ್ನೆ ಬೆಳಿಗ್ಗೆ ಕೂಡಾ ಗೇಟ್ ಜಾಮ್ ಆಗಿದ್ದು, ಗಂಟೆಗಳ ಬಳಿಕ ತೆರೆಯಲಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ. ಹಳೇಯ ಗೇಟ್ ಬಳಿಯಲ್ಲಿಯೇ ನೂತನ ವ್ಯವಸ್ಥೆ ಹೊಂದಿರುವ ಹೊಸ ಗೇಟ್‌ನ್ನು ಸ್ಥಾಪಿಸಲಾಗಿದ್ದರೂ ಅದಕೆ್ಕ ಚಾಲನೆ ನೀಡಲಾಗಿಲ್ಲ. ಹಲವು ವರ್ಷ ಗಳಿಂದ ಗೇಟ್ ಪದೇ ಪದೇ ಹಾನಿಗೀ ಡಾಗುತ್ತಿದೆ. ರೈಲು ಹಾದುಹೋಗುವ ವೇಳೆ ಹಾಕಿದರೆ ಮತ್ತೆ ತೆರೆಯಲು ಸಾಧ್ಯವಾಗದೆ ಬಾಕಿಯಾಗುತ್ತಿದೆ. ಇದರಿಂದ ಬಸ್ ಸಹಿತ ಇತರ ವಾಹಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸ್ವಿಚ್ ಮೂಲಕ ಕಾರ್ಯಾಚರಿಸುವ ಹೊಸ ಗೇಟ್‌ಸ್ಥಾಪಿ ಸಲಾಗಿದ್ದರೂ, ಅದರ ಸಣ್ಣಪುಟ್ಟ ಕೆಲಸಗಳು ಬಾಕಿಯಿರುವುದರಿಂದ ಇನ್ನೂ ಚಾಲನೆಗೊಳಿಸಲು ವಿಳಂಬಗೊಳ್ಳುತ್ತಿದೆ. ಹೊಸಗೇಟ್‌ನ್ನು ಕೂಡಲೇ ಚಾಲನೆಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page