ಹೊಸಂಗಡಿಯಲ್ಲಿ ಹೆದ್ದಾರಿ ನಿರ್ಮಾಣ ಆಮೆ ನಡಿಗೆಯಲ್ಲಿ: ವ್ಯಾಪಾರಿಗಳಿಂದ ಪ್ರತಿಭಟನೆ
ಮಂಜೇಶ್ವರ: ಹೊಸಂಗಡಿ ಪೇಟೆಯಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಸಮಸ್ಯೆ ಸೃಷ್ಟಿಯಾಗಿದ್ದು, ಇದರ ವಿರುದ್ಧ ವ್ಯಾಪಾರಿಗಳು ನಿನ್ನೆ ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಆಮೆ ನಡಿಗೆ ಯಲ್ಲಿ ಸಾಗುತ್ತಿರುವುದೇ ಸಂಚಾರ ಸಮಸ್ಯೆಗೆ ಕಾರಣವೆಂದು ವ್ಯಾಪಾರಿ ಗಳು ಆರೋಪಿಸಿದ್ದಾರೆ. ಸರ್ವೀಸ್ ರಸ್ತೆ ನಿರ್ಮಾಣ ಹೊಸಂಗಡಿ ಪೇಟೆಯಲ್ಲಿ ಪೂರ್ತಿಯಾಗದ ಕಾರಣ ವಾಹನಗಳು ಹೆದ್ದಾರಿಯ ಇಕ್ಕಟ್ಟಾದ ಒಂದೇ ಭಾಗದಲ್ಲಿ ಸಂಚರಿಸುವ ಕಾರಣ ವಾಹನ ದಟ್ಟಣೆ ಉಂಟಾಗುತ್ತಿದೆ. ಇದು ಪೇಟೆಗೆ ತಲಪುವವರಿಗೆ ಸಮಸ್ಯೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಶೀಘ್ರ ಸರ್ವೀಸ್ ರಸ್ತೆ ನಿರ್ಮಿಸ ಬೇಕೆಂದು ವ್ಯಾಪಾರಿ ವ್ಯವಸಾಯಿ ಸಮಿತಿ ಆಗ್ರಹಿಸಿದೆ. ಪ್ರತಿಭಟನೆಯನ್ನು ಬ್ಲೋಕ್ ಪಂ. ಸದಸ್ಯ ಹಮೀದ್ ಹೊಸಂಗಡಿ ಉದ್ಘಾಟಿಸಿದರು. ವ್ಯಾಪಾರಿ ವ್ಯವಸಾಯಿ ಘಟಕದ ಅಧ್ಯಕ್ಷ ಬಷೀರ್ ಕನಿಲ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ದಯಾ ನಂದ ಬಂಗೇರ, ವ್ಯಾಪಾರಿ ಮಹಿಳಾ ವಿಂಗ್ ವಿಭಾಗದ ಕಾರ್ಯದರ್ಶಿ ಜೆಸ್ಸಿ ಅನಿಲ್, ಹಸೈನಾರ್ ಉದ್ಯಾವರ ಮಾ ತನಾಡಿದರು. ಸಲಾಂ ಹೊಸಂಗಡಿ ಸ್ವಾಗತಿಸಿ, ಸುದರ್ಶನ್ ವಂದಿಸಿದರು.