ಹೋಟೆಲ್ ಕಾರ್ಮಿಕ, ಕಾಂಗ್ರೆಸ್ ಕಾರ್ಯಕರ್ತ ನಿಧನ

ಪೆರ್ಲ: ಹೋಟೆಲ್ ಕಾರ್ಮಿಕ, ಏಳ್ಕಾನ ಬಾಳೆಗುಳಿ ನಿವಾಸಿ ಗೋವಿಂದ ನಾಯ್ಕ (51) ನಿಧನಹೊಂದಿದರು. ಅಸೌಖ್ಯ ಸಾವಿಗೆ  ಕಾರಣವೆನ್ನಲಾಗಿದೆ. ಮೈಸೂರು ಸಮೀಪದ ಹೋಟೆಲ್‌ನಲ್ಲಿ ಅಡುಗೆ ಕಾರ್ಮಿಕರಾಗಿದ್ದರು. ಅಲ್ಲಿ ನಿಧನರಾದ ಬಗ್ಗೆ ಮನೆಮಂದಿಗೆ ಮಾಹಿತಿ ಲಭಿಸಿದೆ.

ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಗೋವಿಂದ ನಾಯ್ಕರು ಕಳೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಿ.ಪಂ.ಗೆ ಸ್ಪರ್ಧಿಸಿದ್ದರು. ಎಣ್ಮಕಜೆ  ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ಯಾಗಿದ್ದಾರೆ.  ವಿವಿಧ ಧಾರ್ಮಿಕ ಸಮಿತಿಗಳಲ್ಲಿ ಸಕ್ರಿಯರಾಗಿದ್ದರು.  ಹವ್ಯಾಸಿ  ಮರಾಟಿ ರಂಗಕಲಾವಿದರಾಗಿದ್ದ ಇವರು ಬಾಲೆಸಾಂತು ಕಲಾ ಪ್ರಕಾರವನ್ನು ಪರಂಪರಾಗತವಾಗಿ ಪ್ರದರ್ಶಿಸುತ್ತಿದ್ದರು.

ತಂದೆ ಶಿವನಾಯ್ಕ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ತಾಯಿ ಕಮಲ, ಪತ್ನಿ ಕುಮುದ, ಮಕ್ಕಳಾದ ನಿತಿನ್, ಹರ್ಷತ್, ಸಹೋದರರಾದ ಕೃಷ್ಣ ನಾಯ್ಕ್ (ನಿವೃತ್ತ ಬ್ಯಾಂಕ್ ಮೆನೇಜರ್), ಹರಿಯ ನಾಯ್ಕ್ ಬಿ.ಎಸ್, ಸಹೋದರಿ ರತ್ನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page