ಹೋಟೆಲ್ ನೌಕರ ಹೃದಯಾಘಾತದಿಂದ ನಿಧನ
ಕುಂಬಳೆ: ಕುಂಬಳೆ ಬದ್ರಿಯಾ ನಗರ ಕೆ.ವಿ. ಹೌಸ್‌ನ ಎಂ.ಕೆ. ಮೊಹಮ್ಮದ್ (50) ಹೃದಯಾಘಾ ತದಿಂದ ನಿಧನಹೊಂದಿ ದರು. ನಿನ್ನೆ ರಾತ್ರಿ ಮನೆಯಲ್ಲಿ ಊಟಮಾಡಿ ಕುಳಿತಿದ್ದ ವೇಳೆ ಹೃದಯಾಘಾತ ವುಂಟಾದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಮೊಗ್ರಾಲ್ ಮೈಮೂನಾ ನಗರದಲ್ಲಿ ಹೋಟೆಲ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಸೈನಬ, ಮಕ್ಕಳಾದ ಜಲಾಲ್, ಜಸೀಲ, ಜುಮೈಲ, ಅಳಿಯಂದಿರಾದ ರಶೀದ್ ಅಸ್‌ಹರಿ, ಸಜೀರ್, ಸಹೋದರ ಎಂ.ಕೆ. ಹಂಸ, ಸಹೋದರಿ ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಅಬ್ದುಲ್ಲ ಎಂ.ಕೆ ಈ ಹಿಂದೆ ನಿಧನಹೊಂದಿದ್ದಾರೆ.