ಹೋಟೆಲ್ ಮಾಲಕ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮೃತ್ಯು
ಉಪ್ಪಳ: ಹೋಟೆಲ್ ಮಾಲಕ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಕರ್ನಾಟಕದ ಪುತ್ತೂರು ಬಳಿಯ ಕೌಡಿಚ್ಚಾರು ಪಾಪೆಮಜಲು ನಿವಾಸಿ ಸುಭಾಷ್ ಕುಲಾಲ್ (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಮಂಜೇಶ್ವರ ಬಳಿಯ ಕೋಳ್ಯೂರಿನಲ್ಲಿ ವಾಸಿಸುತ್ತಿದ್ದ ಇವರು ಮಜೀರ್ಪಳ್ಳದಲ್ಲಿ ಹೋಟೆಲ್ ನಡೆಸುತ್ತಿದ್ದರು. ಬಳಿಕ ಕೌಡಿಚ್ಚಾರ್ ನಲ್ಲಿ ಹೋಟೆಲ್ ಆರಂಭಿಸಿದ್ದರು. ಕಳೆದ ಶುಕ್ರವಾರ ರಾತ್ರಿ ಹೋಟೆಲ್ ಮುಚ್ಚಿ ಆಟೋ ರಿಕ್ಷಾದಲ್ಲಿ ಪಾಪೆ ಮಜಲಿಗೆ ತೆರಳಿದ ಅವರು ರಿಕ್ಷಾದಿಂದಿಳಿದು ರಸ್ತೆ ದಾಟುತ್ತಿದ್ದ ವೇಳೆ ಬೇರೊಂದು ರಿಕ್ಷಾ ಅವರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ ಬೇಬಿ, ಪುತ್ರಿ ನಿಶ್ಮಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.