ಹೋಟೆಲ್‌ಗೆ ನುಗ್ಗಿ ನಾಶ: ಮಾಲಕ, ಕಾರ್ಮಿಕರಿಗೆ ಹಲ್ಲೆ
ಬದಿಯಡ್ಕ: ಹೋಟೆಲ್‌ಗೆ ನುಗ್ಗಿ ಆಕ್ರಮಣ ನಡೆಸಿ ನೌಕರರಿಗೆ ಹಲ್ಲೆ ನಡೆಸಿರುವುದಾಗಿ ದೂರಲಾ ಗಿದೆ. ಚೆರ್ಲಡ್ಕದ ರೋಯಲ್ ಫ್ಯಾಮಿಲಿ ಹೋಟೆಲ್ ಮಾಲಕ ಚೆಂಗಳದ ಅನ್ವರ್ ಸಾದತ್‌ರ ದೂರಿ ನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದಾರೆ. ಮೊನ್ನೆ ರಾತ್ರಿ ಘಟನೆ ನಡೆದಿದೆ. ಹೋಟೆಲ್‌ಗೆ ಅತಿಕ್ರಮಿಸಿ ನುಗ್ಗಿದ ತಂಡ ಕುರ್ಚಿಯ ಕಾಲುಗಳಿಂದ ಫ್ಲೆಕ್ಸ್‌ನ್ನು ನಾಶಪಡಿಸಿದ್ದು, ಈ ವೇಳೆ ತಡೆಯಲು ಹೋದ ಹೋಟೆಲ್ ಮಾಲಕ, ಕಾರ್ಮಿಕರಾದ ಬೈಜು, ಸುಬಿನ್, ಬಿಜೋಯ್, ನಸೀರ್ ಎಂಬಿವರಿಗೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ೫೦ ಸಾವಿರ ರೂ.ಗಳ ನಷ್ಟವುಂಟಾಗಿದೆ ಯೆಂದು ದೂರಿನಲ್ಲಿ ಹೇಳಲಾಗಿದೆ. ಘಟನೆಯಲ್ಲಿ ಸೈಜು ನೇತೃತ್ವದ ತಂಡದ ವಿರುದ್ಧ ಕೇಸು ದಾಖಲಿಸಲಾಗಿದೆ.