ಹೋಮ್ ನರ್ಸ್‌ನ ಕೊಲೆ: ಓರ್ವನಿಗೆ ಜೀವಾವಧಿ ಹಾಗೂ ಇನ್ನೋರ್ವನಿಗೆ ಐದು ವರ್ಷ ಸಜೆ

ಕಾಸರಗೋಡು: ಚೆರುವತ್ತೂರಿನ ಹೋಮ್ ನರ್ಸಿಂಗ್ ಸಂಸ್ಥೆಯ ಸಿಬ್ಬಂದಿ ತೃಕರಿಪುರ ಒಳವರ ಮಾವಿಲಂಗಾಡ್ ಕಾಲನಿಯ ಸಿ. ರಜನಿ (೩೪) ರನ್ನು ಕೊಂದು ಹೂತು ಹಾಕಿದ ಪ್ರಕರಣದ ಒಂದನೇ ಆರೋಪಿ ಆದೇ ಹೋಮ್ ನರ್ಸ್ ಸಂಸ್ಥೆಯ ಮಾಲಕ ನೀಲೇಶ್ವರ ಕಣಿಚ್ಚಿರದ ಪೈನಿ ವೀಡಿನ ಪಿ. ಸತೀಶನ್ (೪೮)ನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಜೀವಾವಧಿ ಸಜೆ ಮತ್ತು ಐದು ವರ್ಷ ಕಠಿಣ ಸಜೆ ಹಾಗೂ ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಈ ಪ್ರಕರಣದ ಎರಡನೇ ಆರೋಪಿ ವಡಗರೆ ಚೋಳಂಬೈಲು ಗ್ರೇಸ್ ಭವನದ ಬೆನಿಡಿಕ್ಟ್ ಜೋಸ್ ಅಲಿಯಾಸ್ ಬೆನ್ನಿ (೬೦)ನಿಗೆ ಐದು ವರ್ಷ ಕಠಿಣ ಸಜೆ ಮತ್ತು ೧ ಲಕ್ಷ ರೂ. ಜುಲ್ಮಾನೆಯನ್ನು ನ್ಯಾಯಾ ಲಯ ವಿಧಿಸಿದೆ. ೨೦೧೪ ಅಕ್ಟೋಬರ್ ೯ರಿಂದ ರಜನಿ ನಾಪತ್ತೆಯಾಗಿದ್ದರು. ಬಳಿಕ ಸೆ. ೧೪ರಂದು ಆಕೆಯನ್ನು ಕೊಲೆಗೈಯ್ಯ ಲಾಗಿತ್ತು. ನಂತರ ೨೦೧೪ ಅಕ್ಟೋಬರ್ ೨೦ರಂದು ನೀಲೇಶ್ವರ ಕಣಿಚ್ಚಿರದಲ್ಲಿರುವ ಆರೋಪಿ ಸತೀಶನ್ ಮನೆ ಪಕ್ಕದ ಹಿತ್ತಿಲಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ರಜನಿಯ ಮೃತದೇಹವನ್ನು ಪೊಲೀಸರು ಪತ್ತೆಹಚ್ಚಿದ್ದರು. ಚಂದೇರ ಪೊಲೀಸರು ಕೊಲೆ ಪ್ರಕರಣದ ತನಿಖೆ ನಡೆಸಿದ್ದರು.

You cannot copy contents of this page