೧೨ ಅನಧಿಕೃತ ಹೊಯ್ಗೆ ಕಡವು ನಾಶಗೊಳಿಸಿದ ಪೊಲೀಸ್
ಕುಂಬಳೆ: ಹೊಯ್ಗೆ ಸಾಗಿಸಲು ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಲಿ ಮಾಫಿಯ ತಂಡಗಳು ನಿರ್ಮಿಸಿವೆ ಎನ್ನಲಾದ ೧೨ ಕಡವುಗಳನ್ನು ಪೊಲೀಸರು ನಿನ್ನೆ ಜೆಸಿಬಿ ಬಳಸಿ ನಾಶ ಡಿಸಿದ್ದಾರೆ. ಸರಕಾರಿ ಸ್ಥಳದಲ್ಲೇ ಈ ಕಡವುಗಳನ್ನು ನಿರ್ಮಿಸಲಾಗಿದೆ ಯೆಂದೂ ಪೊಲೀಸರು ತಿಳಿಸಿದ್ದಾರೆ. ಆದುದರಿಂದ ಯಾರ ವಿರುದ್ಧ ಕೇಸು ದಾಖಲಿಸಬೇಕು ಎಂಬ ಕುರಿತು ಆಲೋಚಿಸುತ್ತಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಶಿರಿಯ ವಳಯಂನಲ್ಲಿ ಏಳು ಅನಧಿಕೃತ ಕಡವುಗಳು, ಆರಿಕ್ಕಾಡಿ ಟಿಪಿಕೆ ನಗರದಲ್ಲಿ ಮೂರು ಕಡವುಗಳು ಹಾಗೂ ಮೊಗ್ರಾಲ್‌ನಲ್ಲಿ ಎರಡು ಅನಧಿಕೃತ ಕಡವುಗಳನ್ನು ನಾಶಗೊಳಿಸಲಾಗಿದೆ. ಈ ಕಡವು ಗಳನ್ನು ಯಾರು ನಿರ್ಮಿಸಿದ್ದಾರೆಂ ದೂ ಯಾರೆಲ್ಲ ಈ ಕಡವುಗಳ ಮೂಲಕ ಕಾನೂನು ವಿರುದ್ಧವಾಗಿ ಹೊಯ್ಗೆ ಸಾಗಿಸಿದ್ದಾರೆಂದು ನಾಗರಿಕರಿಗೆ ತಿಳಿದಿರಬಹುದೆಂದು ಹೇಳಲಾಗು ತ್ತಿದೆ. ಆದರೆ ಅವರೊಂದಿಗೂ ಆ ಬಗ್ಗೆ ಯಾರೂ ಕೇಳುತ್ತಿಲ್ಲ ಹಾಗೂ ಅವರಾಗಿ ಆ ಬಗ್ಗೆ ಯಾರಲ್ಲಿಯೂ ತಿಳಿಸುತ್ತಿಲ್ಲವೆಂಬ ಸೂಚನೆಯಿದೆ.