೧೨೫.೨೮ ಲೀಟರ್ ಕರ್ನಾಟಕ ಮದ್ಯ ವಶ

ಕಾಸರಗೋಡು: ಕರಂದಕ್ಕಾಡಿನಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ.ವಿ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ೧೨೫.೨೮ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಅದನ್ನು ಅಲ್ಲಿ ಬಚ್ಚಿಟ್ಟಿರುವುದು ಯಾಕೆಂಬುವುದು ಸ್ಪಷ್ಟಗೊಂಡಿಲ್ಲ. ಆ ಬಗ್ಗೆ  ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಎಕ್ಸೈಸ್ ಆಫೀಸರ್‌ಗಳಾದ ಅಜೀಷ್ ಸಿ, ಪ್ರಜಿತ್ ಕೆ.ಆರ್, ನಸರುದ್ದೀನ್ ಎ.ಕೆ, ಶಿಜಿತ್ ವಿ.ವಿ, ಚಾಲಕ ಕ್ರಿಸ್ಟಿನ್ ಪಿ.ಎ. ಎಂಬವರು ಒಳಗೊಂಡಿದ್ದರು. ವಶಪಡಿಸಲಾದ ಮದ್ಯಕ್ಕೆ ೮೦,೦೦೦ ರೂ. ಗಿಂತಲೂ ಹೆಚ್ಚು ಬೆಲೆ ಇದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page