೯೩ ಗ್ರಾಂ ಎಂಡಿಎಂಎ ವಶ: ಓರ್ವ ಸೆರೆ
ವಯನಾಡ್: ಮುತ್ತಙದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಲಾಗಿದೆ. ಇಲ್ಲಿನ ಅಬಕಾರಿ ಚೆಕ್‌ಪೋಸ್ಟ್‌ನ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬಸ್ ಪ್ರಯಾಣಿಕನಿಂದ ೯೩ ಗ್ರಾಂ ಎಂಡಿಎಂಎ ವಶಪಡಿಸಿ ಕೊಂಡಿದ್ದಾರೆ. ಮುಕ್ಕಂ ನಿವಾಸಿ ಶರ್‌ಹಾನ್ ಕೆ.ಕೆ. ಎಂಬಾತ ಇದನ್ನು ಸಾಗಾಟ ನಡೆಸುತ್ತಿದ್ದನು. ಈತನ ಒಳ ಉಡುಪಿನಲ್ಲಿ ಎಂಡಿಎಂಎ ಬಚ್ಚಿಡಲಾಗಿತ್ತು. ಬೆಂಗಳೂರಿನಿಂದ ಈ ಮಾದಕ ವಸ್ತುವನ್ನು ತಂದಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶರ್‌ಹಾನ್‌ನನ್ನು ಸಂಶಯ ಮೇರೆಗೆ ತಪಾಸಣೆ ನಡೆಸಿದಾಗ ಒಳಉಡುಪಿನಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ಎಂಡಿಎಂಎ ಪತ್ತೆಯಾಗಿದೆ.