ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶ: ಆರೋಪಿಗೆ ಶಿಕ್ಷೆ

0
53

ಕಾಸರಗೋಡು: ನಿಗದಿತ ಪ್ರಮಾಣ ಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ಪ್ರಕರಣದ ಆರೋಪಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೧) ೫೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಕೋಡೋಂ ಬೇಳೂರು ಗ್ರಾಮದ ವೆಳ್ಳಿಮುಂಡ ಪಳಯವಳಪ್ಪಿಲ್ ವೀಡಿನ ಮ್ಯಾಥ್ಯು ಪಿ.ವಿ. (೪೮) ಎಂಬಾತನಿಗೆ ಈ ಜುಲ್ಮಾನೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದೇ ಇದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನಿಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

೨೦೧೮ ಜನವರಿ ೧೩ರಂದು ಬಂದಡ್ಕ ಅಬಕಾರಿ ರೇಂಜ್‌ನ ತಂಡ ಕರಿವೇಡಗಂ ಆನೆಕಲ್ಲು- ಪೊಯಿನಾಚಿ ರಸ್ತೆಯ ಬಸ್ ತಂಗುದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ತಲಾ ಒಂದು ಲೀಟರಿನ ನಾಲ್ಕು ಬಾಟಲಿ ಕೇರಳ ವಿದೇಶ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಮ್ಯಾಥ್ಯು ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಆ ಪ್ರಕರಣದಲ್ಲಿ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ.

NO COMMENTS

LEAVE A REPLY